ಜೆಕ್ ಗಣರಾಜ್ಯದಲ್ಲಿರುವ ಮೃಗಾಲಯವೊಂದು ಕೋವಿಡ್ ಸಮಯದಲ್ಲಿ ತನ್ನಲ್ಲಿರುವ ಚಿಂಪಾಂಜಿಗಳು ಹಾಗೂ ಮಂಗಗಳಿಗೆ ಬೋರ್ ಆಗದೇ ಇರಲೆಂದು ಅವುಗಳಿಗೆ ವಿಡಿಯೋ ಕಾಲಿಂಗ್ ಮೂಲಕ ತಮ್ಮ ಅಣ್ಣ-ತಮ್ಮಂದಿರನ್ನು ಭೇಟಿ ಮಾಡಲು ಅನುವು ಮಾಡಿಕೊಡುತ್ತಿದೆ.
ದೇಶದ ಉತ್ತರ ಭಾಗದಲ್ಲಿರುವ ಡ್ವುರ್ ಕ್ರಲೋವ್ ಎಂಬ ಊರಿನಲ್ಲಿರುವ ಈ ಸಫಾರಿ ಪಾರ್ಕ್‌ನಲ್ಲಿ ದೊಡ್ಡ ಪರದೆಗಳನ್ನು ಅಳವಡಿಸಲಾಗಿದ್ದು, ಅವುಗಳ ಮೂಲಕ ದೇಶದ ದಕ್ಷಿಣ ಭಾಗದಲ್ಲಿರುವ ಬ್ರನೋ ಮೃಗಾಲಯದಲ್ಲಿರುವ ಚಿಂಪಾಂಜಿಗಳ ಜೊತೆಗೆ ಸಮಾಲೋಚನೆ ಮಾಡಿಸಲಾಗುತ್ತಿದೆ. ಬಹಳ ದಿನಗಳಿಂದ ಮೃಗಾಲಯ ಬಣಗುಡುತ್ತಿರುವ ಕಾರಣ ಜಿಂಪಾಂಜಿಗಳಿಗೆ ಬೋರ್ ಆಗದೇ ಇರಲಿ ಎಂದು ಈ ವ್ಯವಸ್ಥೆ ಮಾಡಲಾಗಿದೆ.
ಒಂದೇ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಗಳ ನಡುವಿನ ಸಂಬಂಧ DNA ಪರೀಕ್ಷೆಯಲ್ಲಿ ಬಹಿರಂಗ
ಕಳೆದ ಗುರುವಾರದಿಂದ ಈ ಪ್ರಯೋಗವನ್ನು ಸಫಾರಿ ಪಾರ್ಕ್ ಆರಂಭಿಸಿದ್ದು, ಸಫಾರಿ ಪಾರ್ಕ್‌ನಲ್ಲಿರುವ ಆರು ಚಿಂಪಾಂಜಿಗಳಿಗೆ ಈ ಅವಕಾಶ ಮಾಡಿಕೊಡಲಾಗಿದೆ. ಡಿಸೆಂಬರ್ 18ರಂದು ಈ ಮೃಗಾಲಯವನ್ನು ಸಾರ್ವಜನಿಕರಿಗೆ ಬಂದ್ ಮಾಡಲಾಗಿದ್ದು, ಮತ್ತೆ ಯಾವಾಗ ಆರಂಭವಾಗುತ್ತದೆ ಎಂದು ಸ್ಪಷ್ಟತೆ ಇಲ್ಲ.