alex Certify ಮದುವೆ ಸಮಾರಂಭದಲ್ಲೇ ವಿಶ್ವ ದಾಖಲೆ ನಿರ್ಮಿಸಿದ ವಧು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಸಮಾರಂಭದಲ್ಲೇ ವಿಶ್ವ ದಾಖಲೆ ನಿರ್ಮಿಸಿದ ವಧು….!

ಮದುವೆಯ ದಿನ ತಾನು ಎಲ್ಲರಿಗಿಂತ ಚಂದ ಕಾಣಬೇಕು ಅನ್ನೋ ಆಸೆ ಪ್ರತಿಯೊಬ್ಬ ಹೆಣ್ಮಕ್ಕಳಿಗೂ ಇರುತ್ತೆ. ಮದುವೆ ದಿನ ಧರಿಸುವ ಉಡುಗೆಗಾಗಿ ಯುವತಿಯರು ಸಿಕ್ಕಾಪಟ್ಟೆ ಯೋಚನೆ ಮಾಡುತ್ತಾರೆ.

ಸಿಪ್ರಸ್​​ನ ಮಹಿಳೆ ಮಾರಿಯಾ ಪರಸ್ಕೇವಾ ಎಂಬಾಕೆ ಮದುವೆ ದಿನ ಒಳ್ಳೆಯ ಉಡುಗೆ ಧರಿಸೋದ್ರ ಜೊತೆಗೆ ಈ ಉಡುಗೆಯ ಮೂಲಕವೇ ವಿಶ್ವ ದಾಖಲೆ ನಿರ್ಮಿಸಿದ್ದಾಳೆ.

ಕ್ರಿಶ್ಚಿಯನ್​​ ಧರ್ಮದಲ್ಲಿ ಮದುವೆ ದಿನ ವಧು ಶ್ವೇತವರ್ಣದ ಗೌನ್​ ಧರಿಸುತ್ತಾರೆ. ತಲೆ ಇದೇ ಬಣ್ಣದ ಶಾಲನ್ನೂ ಹಾಕಿಕೊಳ್ತಾರೆ. ಆದರೆ ಮಾರಿಯಾ ತನ್ನ ವಿವಾಹ ಸಂದರ್ಭದಲ್ಲಿ ವಿಶ್ವದಲ್ಲೇ ಅತ್ಯಂತ ಉದ್ದನೆಯ ಶಾಲನ್ನ ತಲೆಗೆ ಹಾಕಿಕೊಂಡಿದ್ದಾಳೆ. ಈ ಶಾಲು 6962.6 ಮೀಟರ್​ ಉದ್ದವಿತ್ತು. ಈ ಶಾಲನ್ನ ಮದುವೆ ನಡೆಯುತ್ತಿದ್ದ ಮೈದಾನದ ಮೇಲೆ ಹಾಸಲಾಗಿತ್ತು.

ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಗಿನ್ನೆಸ್​ ವಿಶ್ವ ದಾಖಲೆ ಈ ಕ್ಲಿಪ್​ನ್ನು ಶೇರ್​ ಮಾಡಿದೆ. ಇನ್ನು ಈ ವಿಚಾರವಾಗಿ ಮಾತನಾಡಿದ ಮಾರಿಯಾ, ಚಿಕ್ಕ ವಯಸ್ಸಿನಿಂದಲೂ ನನಗೆ ಗಿನ್ನೆಸ್​ ದಾಖಲೆ ಮಾಡಬೇಕು ಎಂಬ ಕನಸಿತ್ತು. ಇದೀಗ ನನ್ನ ಕನಸು ಈ ವೇಲ್​ನ ಮೂಲಕ ನಿಜವಾಗಿದೆ ಎಂದು ಹೇಳಿದ್ದಾರೆ.

ಇನ್ನು ಈ ಯುವತಿಯ ಸಾಧನೆಗೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕೆಲವರು ಇದೊಂದು ವ್ಯರ್ಥ ಸಾಧನೆ ಅಂತಾ ಹೇಳಿದ್ರೆ ಇನ್ನೂ ಹಲವರು ಈಕೆ ಶಾಲಿನಂತೆಯೇ ದಾಂಪತ್ಯ ಜೀವನವೂ ಬಹುದೂರ ಸಾಗಲಿ ಎಂದು ಹರಸಿದ್ದಾರೆ.

View this post on Instagram

A post shared by Guinness World Records (@guinnessworldrecords)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...