ಮದುವೆಯ ದಿನ ತಾನು ಎಲ್ಲರಿಗಿಂತ ಚಂದ ಕಾಣಬೇಕು ಅನ್ನೋ ಆಸೆ ಪ್ರತಿಯೊಬ್ಬ ಹೆಣ್ಮಕ್ಕಳಿಗೂ ಇರುತ್ತೆ. ಮದುವೆ ದಿನ ಧರಿಸುವ ಉಡುಗೆಗಾಗಿ ಯುವತಿಯರು ಸಿಕ್ಕಾಪಟ್ಟೆ ಯೋಚನೆ ಮಾಡುತ್ತಾರೆ.
ಸಿಪ್ರಸ್ನ ಮಹಿಳೆ ಮಾರಿಯಾ ಪರಸ್ಕೇವಾ ಎಂಬಾಕೆ ಮದುವೆ ದಿನ ಒಳ್ಳೆಯ ಉಡುಗೆ ಧರಿಸೋದ್ರ ಜೊತೆಗೆ ಈ ಉಡುಗೆಯ ಮೂಲಕವೇ ವಿಶ್ವ ದಾಖಲೆ ನಿರ್ಮಿಸಿದ್ದಾಳೆ.
ಕ್ರಿಶ್ಚಿಯನ್ ಧರ್ಮದಲ್ಲಿ ಮದುವೆ ದಿನ ವಧು ಶ್ವೇತವರ್ಣದ ಗೌನ್ ಧರಿಸುತ್ತಾರೆ. ತಲೆ ಇದೇ ಬಣ್ಣದ ಶಾಲನ್ನೂ ಹಾಕಿಕೊಳ್ತಾರೆ. ಆದರೆ ಮಾರಿಯಾ ತನ್ನ ವಿವಾಹ ಸಂದರ್ಭದಲ್ಲಿ ವಿಶ್ವದಲ್ಲೇ ಅತ್ಯಂತ ಉದ್ದನೆಯ ಶಾಲನ್ನ ತಲೆಗೆ ಹಾಕಿಕೊಂಡಿದ್ದಾಳೆ. ಈ ಶಾಲು 6962.6 ಮೀಟರ್ ಉದ್ದವಿತ್ತು. ಈ ಶಾಲನ್ನ ಮದುವೆ ನಡೆಯುತ್ತಿದ್ದ ಮೈದಾನದ ಮೇಲೆ ಹಾಸಲಾಗಿತ್ತು.
ಇನ್ಸ್ಟಾಗ್ರಾಂ ಪೇಜ್ನಲ್ಲಿ ಗಿನ್ನೆಸ್ ವಿಶ್ವ ದಾಖಲೆ ಈ ಕ್ಲಿಪ್ನ್ನು ಶೇರ್ ಮಾಡಿದೆ. ಇನ್ನು ಈ ವಿಚಾರವಾಗಿ ಮಾತನಾಡಿದ ಮಾರಿಯಾ, ಚಿಕ್ಕ ವಯಸ್ಸಿನಿಂದಲೂ ನನಗೆ ಗಿನ್ನೆಸ್ ದಾಖಲೆ ಮಾಡಬೇಕು ಎಂಬ ಕನಸಿತ್ತು. ಇದೀಗ ನನ್ನ ಕನಸು ಈ ವೇಲ್ನ ಮೂಲಕ ನಿಜವಾಗಿದೆ ಎಂದು ಹೇಳಿದ್ದಾರೆ.
ಇನ್ನು ಈ ಯುವತಿಯ ಸಾಧನೆಗೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕೆಲವರು ಇದೊಂದು ವ್ಯರ್ಥ ಸಾಧನೆ ಅಂತಾ ಹೇಳಿದ್ರೆ ಇನ್ನೂ ಹಲವರು ಈಕೆ ಶಾಲಿನಂತೆಯೇ ದಾಂಪತ್ಯ ಜೀವನವೂ ಬಹುದೂರ ಸಾಗಲಿ ಎಂದು ಹರಸಿದ್ದಾರೆ.
https://www.instagram.com/p/CNGO8h5hWWV/?utm_source=ig_web_copy_link