alex Certify ಐದು ವರ್ಷದ ಮಗುವಿಗೆ ಕಾಲು ಕೊಟ್ಟು ಬೀಳಿಸಿದ ಸೈಕ್ಲಿಸ್ಟ್‌ಗೆ ಒಂದು ವರ್ಷ ಜೈಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐದು ವರ್ಷದ ಮಗುವಿಗೆ ಕಾಲು ಕೊಟ್ಟು ಬೀಳಿಸಿದ ಸೈಕ್ಲಿಸ್ಟ್‌ಗೆ ಒಂದು ವರ್ಷ ಜೈಲು

Cyclist Who Kneed 5-Year-Old to Get Her Out of the Way in Belgium Faces One Year in Prison

ಕಿಡಿಗೇಡಿ ಸೈಕ್ಲಿಸ್ಟ್‌ ಒಬ್ಬ ತನಗೆ ಅಡ್ಡ ಬಂದ ಎಂಬ ಕಾರಣಕ್ಕೆ ಐದು ವರ್ಷದ ಮಗುವೊಂದಕ್ಕೆ ಕಾಲು ಕೊಟ್ಟು ಬೀಳಿಸಲು ಹೋಗಿ ಒಂದು ವರ್ಷ ಜೈಲು ಶಿಕ್ಷೆಗೆ ಗುರಿಯಾದ ಘಟನೆ ಬೆಲ್ಜಿಯಂನಲ್ಲಿ ಜರುಗಿದೆ.

ತಾನು ಮಾಡಿದ ಈ ಕುಯುಕ್ತಿ ಕೆಲಸಕ್ಕೆ ಮಗುವಿನ ಬಳಿ ಕ್ಷಮೆಯಾಚಿಸಲು ಕೋರ್ಟ್ ಆದೇಶ ಕೊಟ್ಟಾಗ ನಿರಾಕರಿಸಿದ್ದಾನೆ ಈ ಸೈಕ್ಲಿಸ್ಟ್‌.

ಪ್ಯಾಟ್ರಿಕ್ ಪಾಸಾ ಹೆಸರಿನ ಈ ವ್ಯಕ್ತಿ ತನ್ನ ಮಡದಿ ಹಾಗೂ ಮಕ್ಕಳೊಂದಿಗೆ ಕ್ರಿಸ್ಮಸ್ ದಿನಾಚರಣೆಗೆಂದು ಔಟಿಂಗ್‌ಗೆ ಬಂದಿದ್ದರು. ತನ್ನ ಕುಟುಂಬ ವಾಕಿಂಗ್ ಮಾಡುತ್ತಿದ್ದ ಸಂದರ್ಭದ ಅಷ್ಟೂ ಕ್ಷಣಗಳನ್ನು ಪ್ಯಾಟ್ರಿಕ್ ವಿಡಿಯೋ ರೆಕಾರ್ಡಿಂಗ್ ಮಾಡಿಕೊಳ್ಳುತ್ತಿದ್ದಾಗ ಸೀನ್‌ನಲ್ಲಿ ಬಂದ ಸೈಕ್ಲಿಸ್ಟ್‌ ಆತನ 5 ವರ್ಷದ ಮಗಳು ನೆಯಾಳನ್ನು ಕಾಲು ಕೊಟ್ಟು ಬೀಳಿಸಿದ್ದಾನೆ.

ಬಳಿಕ ಪ್ಯಾಟ್ರಿಕ್‌ ಈ ವಿಡಿಯೋವನ್ನು ಫೇಸ್ಬುಕ್‌ನಲ್ಲಿ ಶೇರ್‌ ಮಾಡಿಕೊಂಡಿದ್ದು, ಸೈಕ್ಲಿಸ್ಟ್‌ಗೆ ಸರಿಯಾದ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರೆ.

ಕೊನೆಗೆ ಈ ಘಟನೆ ಸಂಬಂಧ ಪೊಲೀಸರಿಗೆ ದೂರು ಕೊಟ್ಟ ಬಳಿಕ, ಪ್ರಕರಣ ದಾಖಲಾಗಿದೆ. ಬಾಲಕಿಗೆ ತಾನು ಹೊಡೆದೆ ಎಂಬ ಅರಿವೇ ಇರಲಿಲ್ಲ ಎಂದ ಸೈಕ್ಲಿಸ್ಟ್‌ ಕ್ಷಮೆಯಾಚಿಸಲು ನಿರಾಕರಿಸಿ ಈಗ ಒಂದು ವರ್ಷದ ಕಾರಾಗೃಹ ಶಿಕ್ಷೆಯಲ್ಲಿ ಇದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...