ಕಿಡಿಗೇಡಿ ಸೈಕ್ಲಿಸ್ಟ್ ಒಬ್ಬ ತನಗೆ ಅಡ್ಡ ಬಂದ ಎಂಬ ಕಾರಣಕ್ಕೆ ಐದು ವರ್ಷದ ಮಗುವೊಂದಕ್ಕೆ ಕಾಲು ಕೊಟ್ಟು ಬೀಳಿಸಲು ಹೋಗಿ ಒಂದು ವರ್ಷ ಜೈಲು ಶಿಕ್ಷೆಗೆ ಗುರಿಯಾದ ಘಟನೆ ಬೆಲ್ಜಿಯಂನಲ್ಲಿ ಜರುಗಿದೆ.
ತಾನು ಮಾಡಿದ ಈ ಕುಯುಕ್ತಿ ಕೆಲಸಕ್ಕೆ ಮಗುವಿನ ಬಳಿ ಕ್ಷಮೆಯಾಚಿಸಲು ಕೋರ್ಟ್ ಆದೇಶ ಕೊಟ್ಟಾಗ ನಿರಾಕರಿಸಿದ್ದಾನೆ ಈ ಸೈಕ್ಲಿಸ್ಟ್.
ಪ್ಯಾಟ್ರಿಕ್ ಪಾಸಾ ಹೆಸರಿನ ಈ ವ್ಯಕ್ತಿ ತನ್ನ ಮಡದಿ ಹಾಗೂ ಮಕ್ಕಳೊಂದಿಗೆ ಕ್ರಿಸ್ಮಸ್ ದಿನಾಚರಣೆಗೆಂದು ಔಟಿಂಗ್‌ಗೆ ಬಂದಿದ್ದರು. ತನ್ನ ಕುಟುಂಬ ವಾಕಿಂಗ್ ಮಾಡುತ್ತಿದ್ದ ಸಂದರ್ಭದ ಅಷ್ಟೂ ಕ್ಷಣಗಳನ್ನು ಪ್ಯಾಟ್ರಿಕ್ ವಿಡಿಯೋ ರೆಕಾರ್ಡಿಂಗ್ ಮಾಡಿಕೊಳ್ಳುತ್ತಿದ್ದಾಗ ಸೀನ್‌ನಲ್ಲಿ ಬಂದ ಸೈಕ್ಲಿಸ್ಟ್ ಆತನ 5 ವರ್ಷದ ಮಗಳು ನೆಯಾಳನ್ನು ಕಾಲು ಕೊಟ್ಟು ಬೀಳಿಸಿದ್ದಾನೆ.
ಬಳಿಕ ಪ್ಯಾಟ್ರಿಕ್ ಈ ವಿಡಿಯೋವನ್ನು ಫೇಸ್ಬುಕ್‌ನಲ್ಲಿ ಶೇರ್ ಮಾಡಿಕೊಂಡಿದ್ದು, ಸೈಕ್ಲಿಸ್ಟ್‌ಗೆ ಸರಿಯಾದ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರೆ.
ಕೊನೆಗೆ ಈ ಘಟನೆ ಸಂಬಂಧ ಪೊಲೀಸರಿಗೆ ದೂರು ಕೊಟ್ಟ ಬಳಿಕ, ಪ್ರಕರಣ ದಾಖಲಾಗಿದೆ. ಬಾಲಕಿಗೆ ತಾನು ಹೊಡೆದೆ ಎಂಬ ಅರಿವೇ ಇರಲಿಲ್ಲ ಎಂದ ಸೈಕ್ಲಿಸ್ಟ್ ಕ್ಷಮೆಯಾಚಿಸಲು ನಿರಾಕರಿಸಿ ಈಗ ಒಂದು ವರ್ಷದ ಕಾರಾಗೃಹ ಶಿಕ್ಷೆಯಲ್ಲಿ ಇದ್ದಾನೆ.