alex Certify ನಿಮ್ಮ ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಮುಗ್ದ ಮಾತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಮುಗ್ದ ಮಾತು

ಮಾಹಿತಿಪೂರ್ಣ ಪೋಸ್ಟ್‌ಗಳಿಂದ ಹಿಡಿದು ಮನರಂಜನೆಯ ವಿಡಿಯೋಗಳವರೆಗೂ ಅಂತರ್ಜಾಲದಲ್ಲಿ ಬೇಕಾದ ಎಲ್ಲವೂ ಸಿಗುತ್ತದೆ ಎಂದು ಹೊಸದಾಗೇನೂ ಹೇಳಬೇಕಿಲ್ಲ. ಇವೆಲ್ಲದರ ನಡುವೆ ಮುದ್ದು ಮಕ್ಕಳ ವಿಡಿಯೋಗಳು ನೆಟ್ಟಿಗರೆಲ್ಲರ ಹೃದಯವನ್ನು ಗೆದ್ದುಬಿಡುತ್ತವೆ.

’ಫಸ್ಟ್‌ ವಿ ಫೀಸ್ಟ್‌’ ಹೆಸರಿನ ಫೇಸ್ಬುಕ್ ಹ್ಯಾಂಡಲ್ ಒಂದು 42 ಸೆಕೆಂಡ್‌ಗಳ ವಿಡಿಯೋವೊಂದನ್ನು ಶೇರ್‌ ಮಾಡಿಕೊಂಡಿದ್ದು, ಅದರಲ್ಲಿ ಮಗುವೊಂದು ತನ್ನ ಅಪ್ಪನಿಗೆ ತಾನು ಕುಕೀ ತಿಂದು ಮುಗಿಸುವವರೆಗೂ 2 ನಿಮಿಷ ಕಾಯಲು ಹೇಳುತ್ತಿರುವುದು ಬಲೇ ಕ್ಯೂಟ್ ಆಗಿದೆ.

10 ವರ್ಷಗಳ ಹಿಂದೆ ಕಳುವಾಗಿದ್ದ ದುಬಾರಿ ಪ್ರತಿಮೆಯನ್ನ ಪತ್ತೆ ಹಚ್ಚಿದ ಪೊಲೀಸರು…..!

“ಅಪ್ಪ ಕಾಫಿಗಾಗಿ ಕಾಯುತ್ತಿದ್ದಾರೆ” ಎಂದು ಈ ಪುಟಾಣಿ ಪುಟ್ಟಿಯ ಅಪ್ಪ-ಅಮ್ಮ ಹೇಳಿದಾಗ ಅದಕ್ಕೆ ತನ್ನದೇ ಮುದ್ದು ಮುದ್ದು ಭಾಷೆಯಲ್ಲಿ ಪ್ರತಿಕ್ರಿಯಿಸುವ ಆ ಮಗು, “ನಾನು ಕುಕೀ ಹಾಗೂ ವಿಟಮಿನ್ಸ್ ತಿಂದು ಮುಗಿಸಲು ಎರಡು ನಿಮಷ ಆಗುತ್ತದೆ. ಆಲ್ಲಿವರೆಗೂ ಕಾಯಿರಿ, ಆಮೇಲೆ ಕಾಫಿ ಮಾಡಿಕೊಡುವೆ” ಎಂದಿದ್ದಾಳೆ. ಈ ವಿಡಿಯೋ ಸಖತ್‌ ವೈರಲ್ ಆಗಿದ್ದು, ನೆಟ್ಟಿಗರು ನೋಡಿ ಭಾರೀ ಖುಷಿ ಪಟ್ಟಿದ್ದಾರೆ.

https://www.facebook.com/watch/?v=3605537076221662&t=3

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...