ಯುಕೆಯ ಸೋಮರ್ ಸೆಟ್ ಕೌಂಟಿ ರಸ್ತೆಯಲ್ಲಿ ಹಸುಗಳು ಹಿಂಡು ಹಿಂಡಾಗಿ ಓಡಾಡಿದ್ದು ಜನರನ್ನ ದಿಗ್ಭ್ರಮೆಗೊಳಪಡಿಸಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡ್ತಾ ಇದೆ.
ಅಕ್ಟೋಬರ್ 24ರ ರಾತ್ರಿ ಈ ಘಟನೆ ನಡೆದಿದ್ದು ಬರೋಬ್ಬರಿ 85 ಹಸುಗಳು ಚಾರ್ಡ್ ಪಟ್ಟಣದಲ್ಲಿರುವ ಫೀನಿಕ್ಸ್ ಹೋಟೆಲ್ ಹಿಂದೆ ಓಡಿ ಹೋಗಿದ್ದಾವೆ ಅಂತಾ ಪತ್ರಿಕೆಯೊಂದು ವರದಿ ಮಾಡಿದೆ. ಹೋಟೆಲ್ನ ಸಿಸಿ ಕ್ಯಾಮರದಲ್ಲಿ ಹಸುಗಳ ಹಿಂಡು ಈ ರೀತಿ ಓಡುತ್ತಿರುವ ದೃಶ್ಯ ಸೆರೆಯಾಗಿದೆ.
ಈ ವಿಚಾರ ತಿಳೀತಾ ಇದ್ದಂತೆ ಅಲರ್ಟ್ ಆದ ಪೊಲೀಸರು ಸ್ಥಳೀಯರ ಸಹಾಯದಿಂದ ಹಸುಗಳ ಹಿಂಡನ್ನ ಸುರಕ್ಷಿತ ಸ್ಥಳಕ್ಕೆ ರವಾನೆ ಮಾಡಿದ್ದಾರೆ. ಆದರೆ ಈ ಹಸುಗಳು ಎಲ್ಲಿಂದ ಬಂದಿದ್ದಾವೆ ಅನ್ನೋದ್ರ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.
https://twitter.com/segrov/status/1320813708680024064?ref_src=twsrc%5Etfw%7Ctwcamp%5Etweetembed%7Ctwterm%5E1320813708680024064%7Ctwgr%5Eshare_3&ref_url=https%3A%2F%2Findianexpress.com%2Farticle%2Ftrending%2Ftrending-globally%2Fherd-of-cattle-stampedes-through-a-street-in-london-6907083%2F