
ಬ್ರಿಟನ್‌ನ ಸೋಮರ್ಸೆಟ್‌ನ ಬೀದಿಯೊಂದರಲ್ಲಿ ಜಾನುವಾರುಗಳು ದಿಕ್ಕಾಪಾಲಾಗಿ ಓಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಆಗಿದೆ.
ಇಲ್ಲಿನ ಚಾರ್ಡ್ ಟೌನ್ ಕೇಂದ್ರದ ಬಳಿ ಇರುವ ಫೀನಿಕ್ಸ್ ಹೊಟೇಲ್ ಬಳಿ ಸುಮಾರು 85 ಹಸುಗಳು ಒಮ್ಮೆಲೇ ಓಡುತ್ತಿರುವುದನ್ನು ಡೇಲಿ ಮೇಲ್‌ನಲ್ಲಿ ವರದಿ ಮಾಡಲಾಗಿದೆ. ಹೊಟೇಲ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾದ ವಿಡಿಯೋದಲ್ಲಿ ಹಸುಗಳು ರಸ್ತೆ ಮೇಲೆ ಓಡುತ್ತಿರುವುದನ್ನು ನೋಡಬಹುದಾಗಿದೆ.
ಈ ಓಟದ ಬಗ್ಗೆ ಪೊಲೀಸರಿಗೆ ಸಾರ್ವಜನಿಕರು ಅಲರ್ಟ್ ಮಾಡಿದ ಕೂಡಲೇ ಅನೇಕ ರಸ್ತೆಗಳನ್ನು ಬ್ಲಾಕ್ ಮಾಡಲಾಗಿತ್ತು. ಘಟನೆಯಲ್ಲಿ ಯಾವುದೇ ಗಾಯಗಳಾಗಿರುವ ವರದಿಯಾಗಿಲ್ಲ. ಹಸುಗಳು ಎಲ್ಲಿಂದ ಬಂದವು ಎಂಬುದು ತಿಳಿದುಬಂದಿಲ್ಲ.
https://twitter.com/segrov/status/1320813708680024064?ref_src=twsrc%5Etfw%7Ctwcamp%5Etweetembed%7Ctwterm%5E1320813708680024064%7Ctwgr%5Eshare_3&ref_url=https%3A%2F%2Findianexpress.com%2Farticle%2Ftrending%2Ftrending-globally%2Fherd-of-cattle-stampedes-through-a-street-in-london-6907083%2F