alex Certify ಲಾಕ್ಡೌನ್ ಲೈಂಗಿಕ ಕ್ರಿಯೆ: ಗರ್ಭ ನಿರೋಧಕ ಕೊರತೆ ನಡುವೆ ಎದುರಾಯ್ತು ಹೊಸ ಆತಂಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್ಡೌನ್ ಲೈಂಗಿಕ ಕ್ರಿಯೆ: ಗರ್ಭ ನಿರೋಧಕ ಕೊರತೆ ನಡುವೆ ಎದುರಾಯ್ತು ಹೊಸ ಆತಂಕ

ಕೊರೋನಾ ಸೋಂಕು ತಡೆಗೆ ಲಾಕ್ ಡೌನ್ ಜಾರಿಯಾಗಿದ್ದರಿಂದ ಮನೆಯಲ್ಲೇ ಉಳಿದುಕೊಳ್ಳುವಂತಾಗಿದೆ. ಈ ನಡುವೆ ದಂಪತಿ, ಸಂಗಾತಿಗಳ ನಡುವೆ ದೈಹಿಕ ಸಂಬಂಧ ಜಾಸ್ತಿಯಾಗಿದೆ.

ಲಾಕ್ಡೌನ್ ಬಿಡುವಿನ ವೇಳೆಯಲ್ಲಿ ಲೈಂಗಿಕ ಕ್ರಿಯೆ ನಡೆಸುವುದರಿಂದ ಮತ್ತು ಗರ್ಭ ನಿರೋಧಕಗಳ ಪೂರೈಕೆಯಲ್ಲಿಯೂ ವ್ಯತ್ಯಾಸವಾಗಿರುವ ಕಾರಣ ಸುಮಾರು 70 ಲಕ್ಷ ಮಹಿಳೆಯರು ಗರ್ಭ ಧರಿಸಲಿದ್ದಾರೆ ಎಂದು ವಿಶ್ವಸಂಸ್ಥೆ ಆತಂಕ ವ್ಯಕ್ತಪಡಿಸಿದೆ. ಇದರಿಂದಾಗಿ ಜನಸಂಖ್ಯಾ ಸ್ಫೋಟದ ಸಾಧ್ಯತೆ ಇದೆ ಎಂದು ಹೇಳಿದೆ.

ಮುಂದಿನ ತಿಂಗಳಲ್ಲಿ ವಿಶ್ವದ ಅತ್ಯಂತ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಸುಮಾರು 70 ಲಕ್ಷ ಅನಪೇಕ್ಷಿತ ಗರ್ಭಧಾರಣೆಯಾಗಲಿದೆ. ಲಾಕ್ ಡೌನ್ ಇರುವುದರಿಂದ ಗರ್ಭ ನಿರೋಧಕಗಳ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇದರಿಂದಾಗಿ ಮನೆಯಲ್ಲಿರುವ ದಂಪತಿಗಳ ನಡುವೆ ದೈಹಿಕ ಸಂಬಂಧ ಜಾಸ್ತಿಯಾಗಿ ಇಷ್ಟವಿಲ್ಲದಿದ್ದರೂ ಹೆಚ್ಚಿನ ಮಹಿಳೆಯರು ಗರ್ಭಿಣಿಯರಾಗಲಿದ್ದಾರೆ ಎಂದು ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ ದತ್ತಾಂಶ ಬಿಡುಗಡೆ ಮಾಡಿದೆ.

ಲಾಕ್ ಡೌನ್ ಕಾರಣದಿಂದ ಗರ್ಭ ನಿರೋಧಕ ಸಿಗುತ್ತಿಲ್ಲ. ಇದರಿಂದ ಕುಟುಂಬ ಯೋಜನೆಗಳನ್ನು ಪಾಲಿಸಲು ಸಾಧ್ಯವಾಗುತ್ತಿಲ್ಲ. ಇದು ಲಕ್ಷಾಂತರ ಮಹಿಳೆಯರು ಮತ್ತು ಯುವತಿಯರ ಮೇಲೆ ಪರಿಣಾಮ ಬೀರಲಿದ್ದು ಇಷ್ಟವಿಲ್ಲದಿದ್ದರೂ ಅವರು ಗರ್ಭ ಧರಿಸಬೇಕಾಗುತ್ತದೆ. ಪುರುಷರು ಮತ್ತು ಮಹಿಳೆಯರಿಗೆ ಅಗತ್ಯವಾಗಿರುವ ಗರ್ಭ ನಿರೋಧಕಗಳು ಸಿಗುತ್ತಿಲ್ಲವಾದ ಕಾರಣ ಬಹುತೇಕ ಮಹಿಳೆಯರು, ಪುರುಷರು ಗರ್ಭನಿರೋಧಕಗಳನ್ನು ಬಳಸಲು ಸಾಧ್ಯವಾಗಿಲ್ಲ ಎಂದು ವರದಿ ಹೇಳಿದೆ.

ಇದೇ ವೇಳೆ ಹೆಚ್ಚಿನ ಸಂಖ್ಯೆಯ ಮಹಿಳೆಯರು ಕೌಟುಂಬಿಕ ದೌರ್ಜನ್ಯ, ಲೈಂಗಿಕ ಹಿಂಸಾಚಾರ, ಲಿಂಗ ತಾರತಮ್ಯಕ್ಕೆ ಒಳಗಾಗುತ್ತಿದ್ದಾರೆ ಎಂದು ವಿಶ್ವಸಂಸ್ಥೆ ಜನಸಂಖ್ಯೆ ನಿಧಿ ಕಾರ್ಯಕಾರಿ ನಿರ್ದೇಶಕ ನತಾಲಿಯಾ ಕನೇಮ್ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...