alex Certify ಮದುವೆ ಖರ್ಚಿನ ದುಡ್ಡು ಉಳಿಸಿ ಅಶಕ್ತರಿಗೆ ಔತಣ ಕೊಟ್ಟ ಜೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಖರ್ಚಿನ ದುಡ್ಡು ಉಳಿಸಿ ಅಶಕ್ತರಿಗೆ ಔತಣ ಕೊಟ್ಟ ಜೋಡಿ

ಕೊರೋನಾ ವೈರಸ್ ಸಾಂಕ್ರಮಿಕದ ಕಾರಣದಿಂದ ಅಮೆರಿಕದ ಇಲಿನಾಯ್ಸ್‌ ನ ಜೋಡಿಯೊಂದು ತನ್ನ ಕನಸಿವ ವಿವಾಹದ ಯೋಜನೆಯನ್ನು ಕೈಬಿಟ್ಟಿದೆ. ವೆಡ್ಡಿಂಗ್ ರಿಸೆಪ್ಷನ್‌ಗೆಂದು ತೆಗೆದಿರಿಸಿದ್ದ ದೊಡ್ಡ ಮೊತ್ತವನ್ನು ಬಡವರಿಗೆ ನೀಡಲೆಂದು ವಿನಿಯೋಗಿಸಿದ್ದಾರೆ.

ಬಿಲ್ಲಿ ಲೆವಿಸ್ ಹಾಗೂ ಎಮಿಲಿ ಬಗ್ ಹೆಸರಿನ ಈ ಜೋಡಿ, ಥ್ಯಾಂಕ್ಸ್ ‌ಗಿವಿಂಗ್ ದಿನದಂದು ಸುಮಾರು 200 ಮಂದಿಗೆ ಎನ್‌ಜಿಓ ಒಂದರ ಮೂಲಕ ಊಟದ ವ್ಯವಸ್ಥೆ ಮಾಡಿದ್ದಾರೆ. ಈ ಜೋಡಿಯು ಅಕ್ಟೋಬರ್‌ 1ರಂದು ಷಿಕಾಗೋ ಸಿಟಿ ಹಾಲ್‌ನಲ್ಲಿ ಸರಳವಾದ ಸಮಾರಂಭವೊಂದರಲ್ಲಿ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದೆ.

ತಮ್ಮ ವೆಡ್ಡಿಂಗ್‌ನ ಬಹುತೇಕ ಕಾರ್ಯಕ್ರಮಗಳನ್ನು ರದ್ದು ಮಾಡಿದ ಈ ಜೋಡಿ, ಇದರಿಂದ ಉಳಿದ $5000 ಗಳನ್ನು ಥ್ಯಾಂಕ್ಸ್‌ ಗಿವಿಂಗ್ ಡಿನ್ನರ್‌ ಏರ್ಪಡಿಸಿ ಅಗತ್ಯವಿರುವ ಜನರು ಹಾಗೂ ಮಾನಸಿಕ ಅಸ್ವಸ್ಥರಿಗೆ ಔತಣ ಕೊಟ್ಟಿದ್ದಾರೆ. ಈ ಜೋಡಿಯ ಔದಾರ್ಯದಲ್ಲಿ ಭಾಗಿಯಾಗಿ ಷಿಕಾಗೋ ಮೂಲದ ಬಿಗ್ ಡೆಲಿಷಿಯಸ್ ಪ್ಲಾನೆಟ್‌ ಪ್ಯಾಕೇಜ್ಡ್‌ ಮೀಲ್‌ಗಳನ್ನು ಪೂರೈಸಿದೆ.

https://www.instagram.com/p/CIBVJoQBecc/?utm_source=ig_web_copy_link

https://www.instagram.com/p/CGGRY1HF5DB/?utm_source=ig_web_copy_link

https://www.facebook.com/photo.php?fbid=10223810750759402&set=a.2471649513280&type=3

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...