alex Certify ಆರು ವರ್ಷಗಳ ಬಳಿಕ ಮಾಲೀಕರನ್ನು ಕೂಡಿಕೊಂಡ ಶ್ವಾನ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರು ವರ್ಷಗಳ ಬಳಿಕ ಮಾಲೀಕರನ್ನು ಕೂಡಿಕೊಂಡ ಶ್ವಾನ…!

ತನ್ನ ಕುಟುಂಬದಿಂದ ಬೇರ್ಪಟ್ಟು ಆರು ವರ್ಷಗಳ ಬಳಿಕ ಸಾಕು ನಾಯಿಯೊಂದು ತನ್ನ ಮನೆಯಿಂದ 320 ಕಿಮೀ ದೂರದ ಜಾಗವೊಂದರಲ್ಲಿ ತನ್ನ ಮಾಲೀಕರನ್ನು ಕೂಡಿಕೊಂಡ ಘಟನೆಯ ಸುದ್ದಿಯೊಂದು ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿದೆ.

ಡರ್ಹಾಮ್‌ನ ಮನೆಯೊಂದರಲ್ಲಿ 2014ರಲ್ಲಿ ಬೋನ್ನಿ ಹೆಸರಿನ ಈ ನಾಯಿಯನ್ನು ಕಳ್ಳತನ ಮಾಡಲಾಗಿತ್ತು. ಮಾಲೀಕರಾದ ಸೈಮನ್ ಹಾಲ್ ಹಾಗೂ ಮಡದಿ ಕರೋಲಿನ್‌ ತಮ್ಮ ಮನೆಯ ಸುತ್ತಲಿನ ಪ್ರದೇಶವನ್ನೆಲ್ಲಾ ಎರಡು ವರ್ಷಗಳ ಮಟ್ಟಿಗೆ ನಿರಂತರ ಹುಡುಕಿ ಹುಡುಕಿ ಸಾಕಾಗಿ ನಾಯಿಯ ಆಸೆಯನ್ನೇ ಕೈಬಿಟ್ಟಿದ್ದಾರೆ.

ನವೆಂಬರ್‌ 19ರಂದು ಡಾಗ್ ವಾರ್ಡನ್ ಒಬ್ಬರಿಂದ ಕರೆ ಬಂದಾಗ ಅಚ್ಚರಿಗೊಂಡ ದಂಪತಿಗೆ ತಮ್ಮ ನಾಯಿಯು ತಮ್ಮ ಮನೆಯಿಂದ 320 ಕಿಮೀ ದೂರದಲ್ಲಿ ಇರುವ ಸಮಾಚಾರ ಕಿವಿಗೆ ಬಿದ್ದಿದೆ.

ನಾಯಿಯು ತನ್ನ ಮಾಲೀಕರೊಂದಿಗೆ ಮತ್ತೆ ಸೇರಿಕೊಂಡ ಕ್ಷಣಗಳ ವಿಡಿಯೋ ಆನ್ಲೈನ್‌ನಲ್ಲಿ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...