ಮನರಂಜನೆ ಬೇಕು ಅಂದ್ರೆ ಸಾಮಾಜಿಕ ಜಾಲತಾಣಕ್ಕಿಂತ ಒಳ್ಳೆಯ ಜಾಗ ನಿಮಗೆ ಮತ್ತೊಂದು ಸಿಗಲಿಕ್ಕಿಲ್ಲ. ಕೇವಲ ಮನರಂಜನೆ ಮಾತ್ರವಲ್ಲದೇ ಕೆಲವು ವಿಡಿಯೋಗಳಂತೂ ಮಾನವೀಯತೆ ಹಿಡಿದ ಕೈಗನ್ನಡಿ ಎಂಬಂತೆ ಇರುತ್ತದೆ.
ಇತ್ತೀಚಿಗೆ ಟಿಕ್ಟಾಕ್ನಲ್ಲಿ ಪೋಸ್ಟ್ ಮಾಡಲಾದ ವಿಡಿಯೋ ಕೂಡ ಜಗತ್ತಿನಲ್ಲಿ ಮಾನವೀಯತೆ ಇನ್ನೂ ಜೀವಂತವಾಗಿದೆ ಅನ್ನೋದನ್ನ ಸಾಬೀತು ಪಡಿಸಿದೆ.
ದಂಪತಿಯೊಂದು ಐರ್ಲೆಂಡ್ನ ಪರ್ವತವೊಂದರಲ್ಲಿ ದಾರಿತಪ್ಪಿದ್ದ ಲ್ಯಾಬ್ರಡರ್ ತಳಿಯ ಶ್ವಾನವನ್ನ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಪಾಕ್ ನಲ್ಲಿರುವ ರಾಜ್ ಕಪೂರ್ ಪೂರ್ವಜರ ಮನೆ ಮಾರಲು ಬರೋಬ್ಬರಿ 200 ಕೋಟಿ ರೂ. ಡಿಮ್ಯಾಂಡ್….!
ಎಲ್ಲೋ ದಾರಿ ತಪ್ಪಿ ಹಿಮದಿಂದಾವೃತವಾದ ಪರ್ವತದಲ್ಲಿ ಸಿಲುಕಿದ್ದ ಹೆಣ್ಣು ಶ್ವಾನ ದಂಪತಿಯ ಕಣ್ಣಿಗೆ ಬಿದ್ದಿದ್ದು ವಿಪರೀತ ಚಳಿಯನ್ನ ತಡೆಯಲು ಸಾಧ್ಯವಾಗದೇ ನಡುಗುತ್ತಿತ್ತು. ಹೆಣ್ಣು ಶ್ವಾನಕ್ಕೆ ಎಷ್ಟು ಚಳಿಯಾಗಿತ್ತೆಂದರೆ ಸ್ಥಳದಿಂದ ಕದಲಲೂ ಸಾಧ್ಯವಾಗದ ಸ್ಥಿತಿಯಲ್ಲಿತ್ತು. ಹೀಗಾಗಿ ಈ ಶ್ವಾನವನ್ನ ಎತ್ತಿಕೊಂಡ ವ್ಯಕ್ತಿ ಅದಕ್ಕೆ ಸ್ವೆಟರ್ನ್ನ ಹಾಕಿದ್ದು ಮಾತ್ರವಲ್ಲದೇ 10 ಕಿಲೋಮೀಟರ್ವರೆಗೆ ಹೆಗಲ ಮೇಲೆ ಹೊತ್ತುಕೊಂಡೇ ಶ್ವಾನವನ್ನ ಸಾಗಿಸಿದ್ದಾರೆ.
ಈಕೆಯನ್ನ ರಕ್ಷಣೆ ಮಾಡಿದ ಬಳಿಕ ಅದರ ನಿಜವಾದ ಮಾಲೀಕರಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ. ಈ ಪ್ರಯತ್ನದಲ್ಲಿ ಯಶಸ್ವಿಯಾದ ದಂಪತಿ ಶ್ವಾನದ ನಿಜವಾದ ಮಾಲೀಕರಿಗೆ ನಾಯಿಯನ್ನ ತಲುಪಿಸಿದ್ದಾರೆ. ಶ್ವಾನವನ್ನ ಎತ್ತಿಕೊಂಡು ಸಾಗುವ ಮೂಲಕ ಅದರ ರಕ್ಷಣೆಯನ್ನ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಇದೀಗ ಸಖತ್ ವೈರಲ್ ಆಗಿದೆ.
https://twitter.com/i/status/1358441218091474945