alex Certify ಈ ಕಾರಣಕ್ಕೆ ವಿವಾದಕ್ಕೀಡಾಗಿದ್ದಾರೆ ಪಾಕ್ ದಂಪತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣಕ್ಕೆ ವಿವಾದಕ್ಕೀಡಾಗಿದ್ದಾರೆ ಪಾಕ್ ದಂಪತಿ…!

ಮದುವೆ ಫೋಟೋಶೂಟ್​ಗಳು ಸದ್ಯದ ಟ್ರೆಂಡ್ ಆಗೋಗಿದೆ. ಅದರಲ್ಲೂ ಸಾಕು ಪ್ರಾಣಿಗಳ ಜೊತೆ ವೆಡ್ಡಿಂಗ್​ ಫೋಟೋಶೂಟ್​ ಮಾಡಿಸೋದು ಸದ್ಯ ಬಹಳ ಚಾಲ್ತಿಯಲ್ಲಿದೆ. ಆದರೆ ಪಾಕಿಸ್ತಾನದ ಜೋಡಿಯೊಂದು ಪ್ರಾಣಿಯ ಜೊತೆ ಫೋಟೋಶೂಟ್​ ಮಾಡಿಸೋಕೆ ಹೋಗಿ ಸಾಕಷ್ಟು ವಿರೋಧವನ್ನ ಎದುರಿಸುತ್ತಿದೆ.‌

ಲಾಹೋರ್​ನಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಪಾಕಿಸ್ತಾನದ ನೂತನ ವಧು – ವರರು ಸಿಂಹದ ಮರಿಯೊಂದಿಗೆ ಫೋಟೋಶೂಟ್​ ಮಾಡಿಸಿಕೊಳ್ಳುವ ಮೂಲಕ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಈ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್​ ಮಾಡಿದ ಕೆಲವೇ ಗಂಟೆಗಳಲ್ಲಿ ವೈರಲ್​ ಆಗಿದ್ದು ಪ್ರಾಣಿಯ ಸುರಕ್ಷತೆ ಕುರಿತಂತೆ ಪ್ರಾಣಿ ಪ್ರಿಯರು ಆಕ್ರೋಶ ಹೊರಹಾಕಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಲಾದ ವಿಡಿಯೋ ಹಾಗೂ ಫೋಟೋಗಳಲ್ಲಿ ದಂಪತಿ ಸಿಂಹದ ಮರಿ ಪಕ್ಕದಲ್ಲಿ ಪೋಸ್​ ನೀಡಿದ್ದಾರೆ. ಸಿಂಹದ ಮರಿ ನೆಲದ ಮೇಲೆ ಮಲಗಿ ನಿದ್ರೆ ಮಾಡ್ತಿರೋದನ್ನ ಕಾಣಬಹುದಾಗಿದೆ.

ಪಾಕಿಸ್ತಾನದ ಪ್ರಾಣಿ ರಕ್ಷಣಾ ಸಂಸ್ಥೆಯೊಂದು ಈ ವಿಡಿಯೋವನ್ನ ಶೇರ್​ ಮಾಡಿದೆ. “ಪಂಜಾಬ್ ‌ವೈಲ್ಡ್‌ಲೈಫ್ ಸಮಾರಂಭಗಳಿಗೆ ಸಿಂಹದ ಮರಿಯನ್ನು ಬಾಡಿಗೆಗೆ ನೀಡಲು ನಿಮ್ಮ ಅನುಮತಿ ನೀಡುತ್ತದೆಯೇ? ನಿದ್ದೆ ಮಾಡ್ತಿರುವ ಈ ಸಿಂಹದ ಮರಿಯನ್ನ ಫೋಟೋಶೂಟ್​ನ ವಸ್ತುವನ್ನಾಗಿ ಬಳಸಲಾಗಿದೆ. ಈ ಸ್ಟುಡಿಯೋ ಲಾಹೋರ್​ನಲ್ಲಿದೆ. ಈ ಮರಿಯನ್ನ ರಕ್ಷಣೆ ಮಾಡಿ ಎಂದು ಮಾರ್ಚ್ 8ರಂದು ಟ್ವೀಟ್​ ಮಾಡಲಾಗಿದೆ.

ಇನ್ನು ಈ ಬಗ್ಗೆ ಲಾಹೋರ್​​ನ  ಸ್ಟುಡಿಯೋ ಮುಖ್ಯಸ್ಥ ಸ್ಪಷ್ಟನೆ ನೀಡಿದ್ದು, ಅವರ ಸ್ನೇಹಿತರೊಬ್ಬರು ಈ ಮರಿಯನ್ನ ಸ್ಟುಡಿಯೋಗೆ ತಂದಿದ್ದರು. ಅದೇ ವೇಳೆ ದಂಪತಿ ಕೂಡ ಅಲ್ಲಿ ಹಾಜರಿದ್ದರು. ಹೀಗಾಗಿ ನಾವು ಸಿಂಹದ ಮರಿಯೊಂದಿಗೆ ಕೆಲ ಫೋಟೋಗಳನ್ನ ಕ್ಲಿಕ್​ ಮಾಡಿದ್ದೇವೆ ಎಂದು ಹೇಳಿದ್ದಾರೆ.

— save the wild (@wildpakistan) March 7, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...