ಮದುವೆ ಫೋಟೋಶೂಟ್ಗಳು ಸದ್ಯದ ಟ್ರೆಂಡ್ ಆಗೋಗಿದೆ. ಅದರಲ್ಲೂ ಸಾಕು ಪ್ರಾಣಿಗಳ ಜೊತೆ ವೆಡ್ಡಿಂಗ್ ಫೋಟೋಶೂಟ್ ಮಾಡಿಸೋದು ಸದ್ಯ ಬಹಳ ಚಾಲ್ತಿಯಲ್ಲಿದೆ. ಆದರೆ ಪಾಕಿಸ್ತಾನದ ಜೋಡಿಯೊಂದು ಪ್ರಾಣಿಯ ಜೊತೆ ಫೋಟೋಶೂಟ್ ಮಾಡಿಸೋಕೆ ಹೋಗಿ ಸಾಕಷ್ಟು ವಿರೋಧವನ್ನ ಎದುರಿಸುತ್ತಿದೆ.
ಲಾಹೋರ್ನಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಪಾಕಿಸ್ತಾನದ ನೂತನ ವಧು – ವರರು ಸಿಂಹದ ಮರಿಯೊಂದಿಗೆ ಫೋಟೋಶೂಟ್ ಮಾಡಿಸಿಕೊಳ್ಳುವ ಮೂಲಕ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಈ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿದ್ದು ಪ್ರಾಣಿಯ ಸುರಕ್ಷತೆ ಕುರಿತಂತೆ ಪ್ರಾಣಿ ಪ್ರಿಯರು ಆಕ್ರೋಶ ಹೊರಹಾಕಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾದ ವಿಡಿಯೋ ಹಾಗೂ ಫೋಟೋಗಳಲ್ಲಿ ದಂಪತಿ ಸಿಂಹದ ಮರಿ ಪಕ್ಕದಲ್ಲಿ ಪೋಸ್ ನೀಡಿದ್ದಾರೆ. ಸಿಂಹದ ಮರಿ ನೆಲದ ಮೇಲೆ ಮಲಗಿ ನಿದ್ರೆ ಮಾಡ್ತಿರೋದನ್ನ ಕಾಣಬಹುದಾಗಿದೆ.
ಪಾಕಿಸ್ತಾನದ ಪ್ರಾಣಿ ರಕ್ಷಣಾ ಸಂಸ್ಥೆಯೊಂದು ಈ ವಿಡಿಯೋವನ್ನ ಶೇರ್ ಮಾಡಿದೆ. “ಪಂಜಾಬ್ ವೈಲ್ಡ್‌ಲೈಫ್ ಸಮಾರಂಭಗಳಿಗೆ ಸಿಂಹದ ಮರಿಯನ್ನು ಬಾಡಿಗೆಗೆ ನೀಡಲು ನಿಮ್ಮ ಅನುಮತಿ ನೀಡುತ್ತದೆಯೇ? ನಿದ್ದೆ ಮಾಡ್ತಿರುವ ಈ ಸಿಂಹದ ಮರಿಯನ್ನ ಫೋಟೋಶೂಟ್ನ ವಸ್ತುವನ್ನಾಗಿ ಬಳಸಲಾಗಿದೆ. ಈ ಸ್ಟುಡಿಯೋ ಲಾಹೋರ್ನಲ್ಲಿದೆ. ಈ ಮರಿಯನ್ನ ರಕ್ಷಣೆ ಮಾಡಿ ಎಂದು ಮಾರ್ಚ್ 8ರಂದು ಟ್ವೀಟ್ ಮಾಡಲಾಗಿದೆ.
ಇನ್ನು ಈ ಬಗ್ಗೆ ಲಾಹೋರ್ನ ಸ್ಟುಡಿಯೋ ಮುಖ್ಯಸ್ಥ ಸ್ಪಷ್ಟನೆ ನೀಡಿದ್ದು, ಅವರ ಸ್ನೇಹಿತರೊಬ್ಬರು ಈ ಮರಿಯನ್ನ ಸ್ಟುಡಿಯೋಗೆ ತಂದಿದ್ದರು. ಅದೇ ವೇಳೆ ದಂಪತಿ ಕೂಡ ಅಲ್ಲಿ ಹಾಜರಿದ್ದರು. ಹೀಗಾಗಿ ನಾವು ಸಿಂಹದ ಮರಿಯೊಂದಿಗೆ ಕೆಲ ಫೋಟೋಗಳನ್ನ ಕ್ಲಿಕ್ ಮಾಡಿದ್ದೇವೆ ಎಂದು ಹೇಳಿದ್ದಾರೆ.
https://twitter.com/i/status/1368662296663363588