alex Certify ಬೃಹತ್ ಬಂಗಲೆಗೆ ನಿಗದಿಪಡಿಸಿದ ಮೌಲ್ಯ ಕೇಳಿ ಕಣ್ಣೀರಿಟ್ಟ ದಂಪತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೃಹತ್ ಬಂಗಲೆಗೆ ನಿಗದಿಪಡಿಸಿದ ಮೌಲ್ಯ ಕೇಳಿ ಕಣ್ಣೀರಿಟ್ಟ ದಂಪತಿ…!

ದೊಡ್ಡ ಮನೆಯನ್ನ ಖರೀದಿ ಮಾಡಬೇಕೆಂದು ತಮ್ಮ ಪ್ರಸ್ತುತ ಮನೆಯನ್ನ ಮಾರಾಟ ಮಾಡೋಕೆ ನಿರ್ಧರಿಸಿದ್ದ ಬರ್ಮಿಂಗ್​ ಹ್ಯಾಮ್​ ತಮ್ಮ ಪ್ರಸ್ತುತ ಮನೆಯ ದರವನ್ನ ಕೇಳಿ ಶಾಕ್​ ಆಗಿದ್ದಾರೆ.

ಮ್ಯಾಟ್​ ಬ್ರೌನ್​ ಹಾಗೂ ಲಿಜ್ಜಿ ಬರ್ನೆಟ್​ ದಂಪತಿ ಪ್ರಸ್ತುತ ವಾಸವಿರುವ ಅಪಾರ್ಟ್​ಮೆಂಟ್​​ಗೆ ಗ್ರೆನ್​ಫೆಲ್​ ಶೈಲಿ ಕ್ಲಾಡಿಂಗ್​ ಮಾಡಿರೋದ್ರಿಂದ ಈ ಅಪಾರ್ಟ್​ಮೆಂಟ್​ ಶೂನ್ಯ ಮೌಲ್ಯದ್ದಾಗಿದೆ ಎಂದು ದಂಪತಿಗೆ ತಿಳಿಸಲಾಗಿದೆ. ಈ ಬಗ್ಗೆ ಹೆಚ್ಚಿನ ವಿವರ ನೀಡುವ ಮೊದಲು ಕ್ಲಾಡಿಂಗ್ ಹಾಗೂ ಗ್ರೆನ್​ಫೆಲ್​ ಕ್ಲಾಡಿಂಗ್​ ಎಂದರೇನು ಎಂದು ತಿಳಿದುಕೊಳ್ಳೋಣ.

ಕ್ಲಾಡಿಂಗ್​ ಎಂದರೆ ಒಂದು ವಸ್ತುವಿನ ಮೇಲೆ ಇನ್ನೊಂದು ಪದರವನ್ನು ಜೋಡಿಸೋದು. ಕಟ್ಟಡವನ್ನ ನಿರ್ಮಾಣ ಮಾಡುವಾಗ ಅದರ ನೋಟವನ್ನ ಸುಧಾರಿಸಲು ಹಾಗೂ ಉಷ್ಣ ನಿರೋಧಕ ಸ್ಥಿತಿ ಉಂಟು ಮಾಡಲು ಸಾಮಾನ್ಯವಾಗಿ ಕಟ್ಟಡದ ಸುತ್ತಲೂ ಕ್ಲಾಡಿಂಗ್​ ಮಾಡಲಾಗುತ್ತೆ.

2017ರಲ್ಲಿ ಕೆನ್ಸಿಂಗ್ಟನ್​​ ಗ್ರೆನ್​ಫೆಲ್​ ಟವರ್​ ಅಗ್ನಿ ಆಹುತಿಗೆ ಒಳಗಾದ ಬಳಿಕ ಬ್ರಿಟನ್​ನಾದ್ಯಂತ ಹಲವು ಕಟ್ಟಡಗಳಿಗೆ ಅಳವಡಿಸಲಾಗಿದ್ದ ಕ್ಲಾಡಿಂಗ್​ ಹೊದಿಕೆಯನ್ನ ಕಿತ್ತು ಹಾಕಲಾಗಿತ್ತು. ಬೆಂಕಿ ಅವಘಡಕ್ಕೆ ಕ್ಲಾಡಿಂಗ್​ ಹೊದಿಕೆ ಕಾರಣ ಎಂಬ ಆರೋಪ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿತ್ತು.

ತಜ್ಞರು ಹೇಳುವ ಪ್ರಕಾರ, ಕ್ಲಾಡಿಂಗ್​ ಪ್ಯಾನೆಲ್​ಗಳಿಂದ ಬೆಂಕಿ ಹರಡುವ ಸಾಧ್ಯತೆ ಹೆಚ್ಚಿರುತ್ತೆ. ಅದರಲ್ಲೂ ಕಡಿಮೆ ಮೌಲ್ಯದ ವಸ್ತುವಿನ ಕ್ಲಾಡಿಂಗ್​ ಅಳವಡಿಸಿದ್ರೆ ಈ ಸಾಧ್ಯತೆ ದುಪ್ಪಟ್ಟು ಎನ್ನಲಾಗಿದೆ. 2017ರಲ್ಲಿ ನಡೆದ ದುರಂತದಲ್ಲಿ 72 ಮಂದಿ ಸಾವನ್ನಪ್ಪಿದ್ದರು.

ಹೀಗಾಗಿ ಬರ್ಮಿಂಗ್​ ಹ್ಯಾಮ್​ ದಂಪತಿಗೆ ಮನೆ ಮಾರಾಟ ಮಾಡೋದು ಸಂಕಷ್ಟವಾಗಿ ಪರಿಣಮಿಸಿದೆ. ಕಟ್ಟಡ ದುರಸ್ಥಿ ಕಾರ್ಯ ಮಾಡೋದ್ರಲ್ಲೇ ನಾವು ದಿವಾಳಿಯಾಗುತ್ತೇವೆ ಅಂತಾ ದಂಪತಿ ಕಣ್ಣೀರು ಹಾಕ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...