ಥೈಲಾಂಡ್ನ ಕಡಲತೀರದಲ್ಲಿ ಅಡ್ಡಾಡ್ಡುತ್ತಿದ್ದ ದಂಪತಿಗೆ ವಿಚಿತ್ರವಾದ ಉಂಡೆ ಸಿಕ್ಕಿದ್ದು ಈ ಉಂಡೆಯಿಂದಾಗಿ ದಂಪತಿಯ ಅದೃಷ್ಟವೇ ಬದಲಾಗಿದೆ.
31 ವರ್ಷದ ವೀರಾ ಜುಂಗ್ಬೂನ್ ಮತ್ತವರ ಪತ್ನಿ 26 ವರ್ಷದ ಮೊನ್ರುಡಿ ತಮ್ಮ ಸ್ನೇಹಿತನನ್ನ ಭೇಟಿಯಾಗಲು ತೆರಳಿದ್ದ ವೇಳೆ ಕಡಲತೀರದಲ್ಲಿದ್ದ ಹಳದಿ ಬಣ್ಣದ ಉಂಡೆಯ ಮೇಲೆ ಇವರ ಗಮನ ನೆಟ್ಟಿದೆ.
ಮೇಣದಂತೆ ಮೃದುವಾಗಿದ್ದ ಈ ಉಂಡೆ ತಿಮಿಂಗಲದ ಹೊರ ಹಾಕುವ ವಿಚಿತ್ರ ದ್ರವದಿಂದ ನಿರ್ಮಾಣವಾಗಿದ್ದು ಎಂಬ ಅಂಶ ತಿಳಿದು ಬಂದಿದೆ.
ಸುಮಾರು 15 ಕೆಜಿ ತೂಕ ಹೊಂದಿರುವ ಈ ಉಂಡೆಯ ಮಾರುಕಟ್ಟೆಯ ದರ ಬರೋಬ್ಬರಿ 58,974,551.10 ರೂಪಾಯಿ ಆಗಿದೆ. ಸದ್ಯ ಸೂಕ್ತ ಖರೀದಿಗಾರರಿಗಾಗಿ ಈ ದಂಪತಿ ಹುಡುಕಾಟ ನಡೆಸಿದ್ದಾರೆ.