ಅಮೆರಿಕದ ಷಿಕಾಗೋದ ಹಿರಿಯ ಜೋಡಿಯ 60 ವರ್ಷಗಳ ದಾಂಪತ್ಯಕ್ಕೆ ಕೋವಿಡ್-19 ಸೋಂಕು ಅಂತ್ಯ ಹಾಡಿದೆ.
ಮೈಕ್ ಬ್ರೂನೋ ಹಾಗೂ ಕರೋಲ್ ಬ್ರೂನೋ ಎಂಬ ಈ ಹಿರಿಯ ಜೋಡಿ ಕೋವಿಡ್-19 ಸೋಂಕಿನ ವಿರುದ್ಧ ಸಕಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದರು. ಆದರೆ ತಮ್ಮ ಮಗ ಹಾಗೂ ಮಗಳು ಕೆಲಸ ಮಾಡುವ ಸಲೂನ್‌ನಲ್ಲಿ ಹೇರ್‌ಕಟ್‌ಗೆಂದು ಕರೋಲ್ ಹೋಗಿದ್ದ ವೇಳೆ ಅವರಿಗೆ ಕೊರೋನಾ ಸೋಂಕು ತಗುಲಿಬಿಟ್ಟಿದೆ.
ಸಲೂನ್‌ನಲ್ಲಿ ಅದೆಷ್ಟೇ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ಮಾಸ್ಕ್ ಧರಿಸಿಕೊಂಡರೂ ಸಹ ಕರೋಲ್‌ಗೆ ಸೋಂಕು ಅಂಟಿಬಿಟ್ಟಿದೆ. ಅವರಿಂದ ಅವರ ಪತಿ ಮೈಕ್ ಸಹ ಸೋಂಕು ಪೀಡಿತರಾಗಿಬಿಟ್ಟಿದ್ದಾರೆ.
ಇದಾದ ಬಳಿಕ, ದಂಪತಿಗಳಿಬ್ಬರೂ ಸಹ ಕೇವಲ ಹತ್ತು ದಿನಗಳ ಅಂತರದಲ್ಲಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ತಮ್ಮ ಹೆತ್ತವರ ನಿಧನವು ಎಲ್ಲರಿಗೂ ಎಚ್ಚರಿಕೆಯ ಘಂಟೆಯಾಗಲಿ ಎಂದಿರುವ ದುಃಖತಪ್ತ ಪುತ್ರ ಜೋಸೆಫ್ ಬ್ರೂನೋ, ಯಾರು ಬೇಕಾದರೂ ಈ ವೈರಸ್‌ಗೆ ಬಲಿಯಾಗಬಹುದು ಎಂದು ಎಲ್ಲರೂ ಅರಿತುಕೊಂಡಲ್ಲಿ ಒಳ್ಳೆಯದು ಎಂದಿದ್ದಾರೆ.