ಕಳೆದ ಶನಿವಾರ ಮಧ್ಯರಾತ್ರಿಯಾಗುತ್ತಿದ್ದಂತೆಯೇ ಸ್ಪೇನ್ನ ಬೀದಿಬೀದಿಗಳಲ್ಲಿ ಅಪಾರ ಸಂಖ್ಯೆಯಲ್ಲಿ ಯುವಜನತೆ ನೆರದಿತ್ತು. ದೇಶದಲ್ಲಿ ಆರು ತಿಂಗಳ ಲಾಕ್ಡೌನ್ ಅಂತ್ಯಗೊಂಡಿದ್ದನ್ನು ಆಚರಿಸಲು ಈ ಯುವಕರು ಆ ಮಟ್ಟದಲ್ಲಿ ನೆರೆದಿದ್ದರು.
ಕಳೆದ ಅಕ್ಟೋಬರ್ನಿಂದ ಇದ್ದ ಲಾಕ್ಡೌನ್ ಅನ್ನು ಸ್ಪೇನ್ ಸರ್ಕಾರ ತೆರವುಗೊಳಿಸಿದ್ದು, ಹಲವಾರು ತಿಂಗಳುಗಳ ಬಳಿಕ ಸ್ಪೇನಿಗರು ತಮ್ಮ ದೇಶದೆಲ್ಲೆಡೆ ಸಂಚರಿಸಲು ಇದ್ದ ನಿರ್ಬಂಧದಿಂದ ಹೊರ ಬಂದಿದ್ದಾರೆ.
ಸೋಂಕಿತರ ಪ್ರಮಾಣ ದಿನೇ ದಿನೇ ಹಿಡಿತಕ್ಕೆ ಬರುತ್ತಿದ್ದು, ಲಸಿಕಾ ಕಾರ್ಯಕ್ರಮ ಜೋರಾಗಿ ಸಾಗುತ್ತಿರುವ ಹಿನ್ನೆಲೆಯಲ್ಲಿ ಸ್ಪೇನ್ನ 17 ಪ್ರಾಂತ್ಯಗಳಲ್ಲಿ ಕೋವಿಡ್ ನಿರ್ಬಂಧವನ್ನು ಭಾಗಶಃ ತೆರವುಗೊಳಿಸಲಾಗಿದೆ.
ಇಲ್ಲಿದೆ ನೋಡಿ ವಿಶ್ವದ ಅತ್ಯಂತ ಹಳೆಯ ಬಲೂನು….!
ಮ್ಯಾಡ್ರಿಡ್ನ ಸೆಂಟ್ರಲ್ ಪುಯೆರ್ಟಾ ಡೆಲ್ ಸೊಲ್ ಚೌಕದ ಬಳಿ ಮಾಸ್ಕ್ ಕಳಚಿ ನೆರೆದ ನೂರಾರು ಯುವಕರನ್ನು ನಿಯಂತ್ರಿಸಲು ಪೊಲೀಸರು ಬರಬೇಕಾಯಿತು. ದಿಗ್ಬಂಧನದಿಂದ ತಮಗೆ ಸಿಕ್ಕ ಮುಕ್ತಿಯನ್ನು ಆಚರಿಸುತ್ತಿರುವ ಜನರ ಚಿತ್ರಗಳು ಎಲ್ಲೆಡೆ ಸದ್ದು ಮಾಡುತ್ತಿವೆ.
ಇದೇ ವೇಳೆ ಜೋಡಿಯೊಂದು ಪರಸ್ಪರ ಚುಂಬಿಸಿಕೊಳ್ಳುತ್ತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದೇಶದ ಅನೇಕ ಭಾಗಗಳಲ್ಲಿ ಇಂಥದ್ದೇ ಚಿತ್ರಗಳನ್ನು ಸೆರೆ ಹಿಡಿದು ಶೇರ್ ಮಾಡಲಾಗಿದೆ.