ದಂಪತಿ ಎಡವಟ್ಟಿನಿಂದ ಹಾಳಾಯ್ತು ಕೋಟ್ಯಾಂತರ ಮೌಲ್ಯದ ಕಲಾಕೃತಿ 06-04-2021 8:44AM IST / No Comments / Posted In: Latest News, International ದಕ್ಷಿಣ ಕೊರಿಯಾದ ದಂಪತಿ ಬರೋಬ್ಬರಿ 3.6 ಕೋಟಿ ರೂಪಾಯಿ ಮೌಲ್ಯದ ಕಲಾಕೃತಿಯ ಮೇಲೆ ಅಕಸ್ಮಾತ್ ಆಗಿ ಬಣ್ಣವನ್ನ ಬಳಿಯುವ ಮೂಲಕ ಬೆಲೆ ಬಾಳುವ ಚಿತ್ರವನ್ನ ಹಾಳು ಮಾಡಿದ್ದಾರೆ. ಲೊಟ್ಟೆ ವರ್ಲ್ಡ್ ಮಾಲ್ನಲ್ಲಿರುವ ಆರ್ಟ್ ಗ್ಯಾಲರಿಯ ಸಿಸಿ ಟಿವಿ ದೃಶ್ಯಾವಳಿಗಳಲ್ಲಿ ಈ ದಂಪತಿ ಅಮೆರಿಕದ ಮಿಲಿಯನ್ ಡಾಲರ್ ಮೌಲ್ಯದ ಕಲಾಕೃತಿಯ ಮೇಲೆ ಮನಬಂದಂತೆ ಬಣ್ಣವನ್ನ ಚಿಮ್ಮಿಸಿದ್ದಾರೆ. ಈ ಕಲಾಕೃತಿಯನ್ನ ಕಲಾವಿದ ಜೋನ್ವನ್ ಎಂಬವರು 2016ರಲ್ಲಿ ಪ್ರೇಕ್ಷಕರ ಮುಂದೆಯೇ ರಚಿಸಿದ್ದರು. ಇದು 240x 700 ಸೆಂಟಿ ಮೀಟರ್ ಅಳತೆ ಹೊಂದಿದೆ. ವಿಧಾನಸಭಾ ಚುನಾವಣೆಗೂ ಮುನ್ನ ಬರೋಬ್ಬರಿ 428 ಕೋಟಿ ರೂ. ಮೌಲ್ಯದ ಅಕ್ರಮ ಸಂಪತ್ತು ವಶಕ್ಕೆ..! ಈ ಕಲಾಕೃತಿಯನ್ನ ಹಾಗೂ ಕಲಾಕೃತಿಗೆ ರಚಿಸಲು ಬಳಸಲಾಗಿದ್ದ ಬಣ್ಣ ಹಾಗೂ ಬ್ರಶ್ಗಳನ್ನ ಕಲಾಕೃತಿ ಪ್ರದರ್ಶನ ಕಾರ್ಯಕ್ರಮಗಳಿಗೆ ವರ್ಗಾಯಿಸಲಾಗುತ್ತಿತ್ತು. ಹೀಗಾಗಿ ಈ ಆರ್ಟ್ ಗ್ಯಾಲರಿಯಲ್ಲಿಯೂ ಬಣ್ಣ ಹಾಗೂ ಬ್ರಶ್ ಎದುರಿಗೇ ಇರೋದನ್ನ ಕಂಡ ದಂಪತಿ ಇದಕ್ಕೆ ತಮ್ಮದೇ ಒಂದು ರೂಪ ಕೊಡೋಣ ಅಂತಾ ಬಣ್ಣಗಳನ್ನ ಚಿಮ್ಮಿಸಿದ್ದಾರೆ ಎನ್ನಲಾಗಿದೆ. ಈ ಘಟನೆ ಬಳಿಕ ದಂಪತಿಯನ್ನ ಬಂಧಿಸಲಾಯಿತಾದರೂ ಗೊತ್ತಿಲ್ಲದೇ ಮಾಡಿದ ತಪ್ಪಾಗಿದ್ದರಿಂದ ಬಿಡುಗಡೆ ಮಾಡಲಾಗಿದೆ. ಇದೀಗ ಇಂತಹದ್ದೇ ಮತ್ತೊಂದು ಕಲಾಕೃತಿಯನ್ನ ರಚಿಸಿಕೊಡೋಕೆ ಸಾಧ್ಯವಾ ಅಂತಾ ಕಲಾವಿದನೊಂದಿಗೆ ಚರ್ಚೆ ಮಾಡಲಾಗುತ್ತಿದೆ ಎಂದು ಕಲಾಕೃತಿ ಪ್ರದರ್ಶನದ ಮುಖ್ಯಸ್ಥ ವೂಕ್ ಹೇಳಿದ್ದಾರೆ. ಕಳೆದ ವರ್ಷ ಫೆಬ್ರವರಿ ತಿಂಗಳಲ್ಲೂ ಬ್ರಿಟನ್ನಲ್ಲಿ ದಂಪತಿ ವ್ಯಾಲೆಂಟೈನ್ಸ್ ಡೇ ಕಲಾಕೃತಿಯನ್ನ ಹಾಳುಗೆಡವಿತ್ತು. ಈ ಕಲಾಕೃತಿಯನ್ನ ರಚಿಸಿದ ಕೇವಲ 48 ಗಂಟೆಗಳಲ್ಲಿ ಅದನ್ನ ಹಾಳು ಮಾಡಲಾಗಿತ್ತು. A young couple accidentally vandalized a painting worth about $500,000 at a gallery in Seoul, its exhibition head said on Friday. Footage showed the couple using acrylic paint and a brush that were part of a display near the artwork to splatter a new addition to the piece. pic.twitter.com/eYy0gsFHX3 — CBS News (@CBSNews) April 2, 2021