alex Certify ಪದಗ್ರಹಣ ದಿನದಂದು ಸೀರೆ ಉಡಲಿದ್ದಾರಾ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪದಗ್ರಹಣ ದಿನದಂದು ಸೀರೆ ಉಡಲಿದ್ದಾರಾ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​..?

ಜನವರಿ 20ರಂದು ಅಮೆರಿಕದಲ್ಲಿ ನಡೆಯಲಿರುವ ಪದಗ್ರಹಣ ಸಮಾರಂಭದಲ್ಲಿ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ ಭಾರತೀಯ ಸಾಂಪ್ರದಾಯಿಕ ಉಡುಗೆಯಾದ ಸೀರೆಯನ್ನ ಉಡ್ತಾರಾ ಎಂಬ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಚರ್ಚೆಯಾಗ್ತಿದೆ.

ಅಂದಹಾಗೆ ಕಮಲಾ ಹ್ಯಾರೀಸ್​ ಉಡುಪಿನ ವಿಚಾರ ಇಷ್ಟರ ಮಟ್ಟಿಗೆ ಚರ್ಚೆಯಾಗೋಕೆ ಕಾರಣಾನೂ ಇದೆ. 2019ರಲ್ಲಿ ಏಷ್ಯನ್​ ಅಮೆರಿಕನ್​ ಗುಂಪೊಂದು ಒನ್​ ಎಪಿಐಎ ನೆವಾಡಾದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಪ್ರೇಕ್ಷಕರೊಬ್ಬರು, ನೀವು ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದರೆ ಭಾರತೀಯ ಸಾಂಪ್ರದಾಯಿಕ ಉಡುಪನ್ನ ಧರಿಸುತ್ತೀರಾ ಎಂದು ಪ್ರಶ್ನೆ ಮಾಡಿದ್ದರು.

ಪ್ರೇಕ್ಷಕರೊಬ್ಬರ ಈ ಪ್ರಶ್ನೆಗೆ ಕಮಲಾ ಮೊದಲು ಗೆಲ್ಲೋಣ ಎಂದು ನಗುತ್ತಲೇ ಉತ್ತರಿಸಿದ್ದರು. ಅಲ್ಲದೇ ನನ್ನ ತಾಯಿ, ಸಾಂಸ್ಕೃತಿಕ ಹಿನ್ನೆಲೆ ನಮ್ಮ ಹೆಮ್ಮೆ ಎಂದು ಹೇಳುತ್ತಲೇ ನಮ್ಮನ್ನ ಬೆಳೆಸಿದ್ದಾರೆ ಎಂದು ಹೇಳಿದ್ದರು.

ಕಮಲಾ ಹ್ಯಾರಿಸ್​ ತಾಯಿ ಶ್ಯಾಮಲಾ ಗೋಪಾಲನ್​ ಚೆನ್ನೈನಲ್ಲಿ ಜನಿಸಿದವರಾಗಿದ್ದು ಅಮೆರಿಕಕ್ಕೆ ವಲಸೆ ಹೋಗಿದ್ದರು. ಕಮಲಾ ತಂದೆ ಜಮೈಕಾದವರಾಗಿದ್ದಾರೆ.

ಪದಗ್ರಹಣ ದಿನದಂದು ಕಮಲಾ ಯಾವ ಉಡುಗೆ ತೊಡುತ್ತಾರೆ ಅನ್ನೋದು ಅಷ್ಟೊಂದು ಪ್ರಮುಖ ವಿಚಾರ ಅಲ್ಲದೇ ಇದ್ದರೂ ಸಹ, ಅವರೇನಾದರೂ ಭಾರತೀಯ ಉಡುಗೆ ಧರಿಸಿದ್ರೆ ಬಿಡೆನ್​ – ಹ್ಯಾರಿಸ್​ ಆಡಳಿತ ವಿಶ್ವದ ಮೇಲೆ ಹೇಗೆ ಪ್ರಭಾವ ಬೀರಲು ಯತ್ನಿಸ್ತಾರೆ ಅನ್ನೋದನ್ನ ತೋರಿಸುತ್ತೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಸುಂದರವಾಗಿ ನೇಯ್ದ ಬನಾರಸಿ ಸೀರೆಯಲ್ಲಿ ಪದಗ್ರಹಣ ವೇದಿಕೆಯ ಮೇಲೆ ನಾನು ಕಮಲಾರನ್ನೂ ನೋಡಿದ್ರೂ ಆಶ್ಚರ್ಯವಿಲ್ಲ ಎಂದು ಫ್ಯಾಶನ್​ ಡಿಸೈನರ್​ ಬಿಭು ಮೊಹಾಪಾತ್ರ ಹೇಳಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...