alex Certify ಠಾಣೆಯಲ್ಲೇ ಕ್ಷೌರ ಮಾಡಿಸಿಕೊಂಡ ಪೊಲೀಸರಿಗೆ ಭಾರಿ ದಂಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಠಾಣೆಯಲ್ಲೇ ಕ್ಷೌರ ಮಾಡಿಸಿಕೊಂಡ ಪೊಲೀಸರಿಗೆ ಭಾರಿ ದಂಡ

ಪೊಲೀಸ್​ ಠಾಣೆಯ ಒಳಗಡೆ ಕ್ಷೌರ ಮಾಡಲು ಕ್ಷೌರಿಕನನ್ನು ನೇಮಿಸಿಕೊಂಡಿದ್ದ ಲಂಡನ್​ನ 31 ಪೊಲೀಸ್​ ಅಧಿಕಾರಿಗಳಿಗೆ 20 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.

ಬೆತ್ನಲ್​​ ಗ್ರೀನ್​ ಪೊಲೀಸ್​ ಠಾಣೆಯಲ್ಲಿ ಜನವರಿ 17 ರಿಂದ ಕ್ಷೌರಿಕ ಠಾಣೆಗೆ ಬಂದು ಕ್ಷೌರ ಮಾಡುತ್ತಿದ್ದ ಎನ್ನಲಾಗಿದೆ.

ಕೊರೊನಾ ಮಾರ್ಗಸೂಚಿಗಳನ್ನ ಉಲ್ಲಂಘಿಸಿದ ಕಾರಣಕ್ಕೆ ಪೊಲೀಸ್​ ಅಧಿಕಾರಿಗಳಿಗೆ ದಂಡ ವಿಧಿಸಲಾಗಿದೆ. ಅಲ್ಲದೇ ಈ ಸಂಬಂಧ ಹೆಚ್ಚಿನ ತನಿಖೆಗೂ ಸೂಚನೆ ನೀಡಲಾಗಿದೆ.

ಪೊಲೀಸ್​ ಠಾಣೆಗೆ ಬರುತ್ತಿದ್ದ ಟರ್ಕಿಶ್​ ಮೂಲದ ಕ್ಷೌರಿಕನಿಗೆ ಪೊಲೀಸ್​ ಅಧಿಕಾರಿಗಳು ತಲಾ 1,000.37 ರೂಪಾಯಿ ನೀಡುತ್ತಿದ್ದರು ಎನ್ನಲಾಗಿದೆ. ಅಲ್ಲದೇ ಪೊಲೀಸರ ಈ ಬೇಜವಾಬ್ದಾರಿತನಕ್ಕೆ ಹಿರಿಯ ಪೊಲೀಸ್​ ಅಧಿಕಾರಿ ಮಾರ್ಕಸ್​ ಬಾರ್ನೆಟ್​ ಬೇಸರ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿದೆ 1,73,740 ಕೋವಿಡ್ ಸಕ್ರಿಯ ಪ್ರಕರಣ – 24 ಗಂಟೆಯಲ್ಲಿ ಪತ್ತೆಯಾದ ಹೊಸ ಕೇಸ್ ಗಳೆಷ್ಟು ಗೊತ್ತಾ….?

ಕೊರೊನಾ ಮಾರ್ಗಸೂಚಿಗಳನ್ನ ಪಾಲಿಸಬೇಕಾದ ಪೊಲೀಸ್​ ಅಧಿಕಾರಿಗಳೇ ಈ ರೀತಿ ಬೇಜವಾಬ್ದಾರಿತನ ಮೆರೆದಿದ್ದು ಕಂಡು ದುಃಖವಾಗಿದೆ. ಪೊಲೀಸ್​ ಅಧಿಕಾರಿಗಳು ಚ್ಯಾರಿಟಿಗೆ ಹಣ ನೀಡಿದ್ದಾರೆ. ಆದರೂ ಸಹ ಇಂತಹ ಕೃತ್ಯವನ್ನ ಕ್ಷಮಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...