ಪೊಲೀಸ್ ಠಾಣೆಯ ಒಳಗಡೆ ಕ್ಷೌರ ಮಾಡಲು ಕ್ಷೌರಿಕನನ್ನು ನೇಮಿಸಿಕೊಂಡಿದ್ದ ಲಂಡನ್ನ 31 ಪೊಲೀಸ್ ಅಧಿಕಾರಿಗಳಿಗೆ 20 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.
ಬೆತ್ನಲ್ ಗ್ರೀನ್ ಪೊಲೀಸ್ ಠಾಣೆಯಲ್ಲಿ ಜನವರಿ 17 ರಿಂದ ಕ್ಷೌರಿಕ ಠಾಣೆಗೆ ಬಂದು ಕ್ಷೌರ ಮಾಡುತ್ತಿದ್ದ ಎನ್ನಲಾಗಿದೆ.
ಕೊರೊನಾ ಮಾರ್ಗಸೂಚಿಗಳನ್ನ ಉಲ್ಲಂಘಿಸಿದ ಕಾರಣಕ್ಕೆ ಪೊಲೀಸ್ ಅಧಿಕಾರಿಗಳಿಗೆ ದಂಡ ವಿಧಿಸಲಾಗಿದೆ. ಅಲ್ಲದೇ ಈ ಸಂಬಂಧ ಹೆಚ್ಚಿನ ತನಿಖೆಗೂ ಸೂಚನೆ ನೀಡಲಾಗಿದೆ.
ಪೊಲೀಸ್ ಠಾಣೆಗೆ ಬರುತ್ತಿದ್ದ ಟರ್ಕಿಶ್ ಮೂಲದ ಕ್ಷೌರಿಕನಿಗೆ ಪೊಲೀಸ್ ಅಧಿಕಾರಿಗಳು ತಲಾ 1,000.37 ರೂಪಾಯಿ ನೀಡುತ್ತಿದ್ದರು ಎನ್ನಲಾಗಿದೆ. ಅಲ್ಲದೇ ಪೊಲೀಸರ ಈ ಬೇಜವಾಬ್ದಾರಿತನಕ್ಕೆ ಹಿರಿಯ ಪೊಲೀಸ್ ಅಧಿಕಾರಿ ಮಾರ್ಕಸ್ ಬಾರ್ನೆಟ್ ಬೇಸರ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿದೆ 1,73,740 ಕೋವಿಡ್ ಸಕ್ರಿಯ ಪ್ರಕರಣ – 24 ಗಂಟೆಯಲ್ಲಿ ಪತ್ತೆಯಾದ ಹೊಸ ಕೇಸ್ ಗಳೆಷ್ಟು ಗೊತ್ತಾ….?
ಕೊರೊನಾ ಮಾರ್ಗಸೂಚಿಗಳನ್ನ ಪಾಲಿಸಬೇಕಾದ ಪೊಲೀಸ್ ಅಧಿಕಾರಿಗಳೇ ಈ ರೀತಿ ಬೇಜವಾಬ್ದಾರಿತನ ಮೆರೆದಿದ್ದು ಕಂಡು ದುಃಖವಾಗಿದೆ. ಪೊಲೀಸ್ ಅಧಿಕಾರಿಗಳು ಚ್ಯಾರಿಟಿಗೆ ಹಣ ನೀಡಿದ್ದಾರೆ. ಆದರೂ ಸಹ ಇಂತಹ ಕೃತ್ಯವನ್ನ ಕ್ಷಮಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.