alex Certify BIG NEWS: ಕೊರೊನಾಕ್ಕೆ ಮದ್ದಾಗ್ತಿದೆ ಅಗ್ಗದ ಪೇನ್ ಕಿಲ್ಲರ್ ಮಾತ್ರೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೊರೊನಾಕ್ಕೆ ಮದ್ದಾಗ್ತಿದೆ ಅಗ್ಗದ ಪೇನ್ ಕಿಲ್ಲರ್ ಮಾತ್ರೆ…!

ಅತ್ಯಂತ ಅಗ್ಗದ ನೋವಿನ ಔಷಧಿ  Ibuprofen ಕೊರೊನಾ ರೋಗಿಗಳಿಗೆ ಭರವಸೆ ಸುದ್ದಿ ನೀಡಿದೆ. ರೋಗಿಗಳು ಚೇತರಿಸಿಕೊಳ್ಳುವ ಭರವಸೆಯನ್ನು ಹೆಚ್ಚಿಸುತ್ತಿದೆ. ಕೊರೊನಾ ರೋಗಿಗಳ ಮೇಲೆ ಯುಕೆ ವಿಜ್ಞಾನಿಗಳು ಈ ಔಷಧದ ಪ್ರಯೋಗವನ್ನು ಪ್ರಾರಂಭಿಸಿದ್ದಾರೆ.

ಈ ಮೊದಲು ಪ್ರಾಣಿಗಳ ಮೇಲೆ ನಡೆಸಿದ ಅಧ್ಯಯನದಲ್ಲಿ Ibuprofen ಕೊರೊನಾ ರೋಗಿಗಳ ಬದುಕುಳಿಯುವ ಸಾಧ್ಯತೆಗಳು ಶೇಕಡಾ 80 ರಷ್ಟು ಹೆಚ್ಚಾಗಬಹುದು ಎಂದು ತಿಳಿದುಬಂದಿತ್ತು. ಮಾರುಕಟ್ಟೆಯಲ್ಲಿ Ibuprofen ಒಂದು ಟ್ಯಾಬ್ಲೆಟ್ ಬೆಲೆ ಒಂದು ರೂಪಾಯಿ. ಕೊರೊನಾ ವೈರಸ್ ಆರಂಭಿಕ ದಿನಗಳಲ್ಲಿ ಈ ಔಷಧಿ ಬಳಕೆಯನ್ನು ನಿಷೇಧಿಸಲಾಗಿತ್ತು. ಆಗ ಫ್ರೆಂಚ್ ಆರೋಗ್ಯ ಸಚಿವರು ಇದು ಕೊರೊನಾ ಸೋಂಕನ್ನು ಹೆಚ್ಚಿಸುತ್ತದೆ ಎಂದಿದ್ದರು.

ನೋವು ನಿರೋಧಕ ಹಾಗೂ ಉರಿಯೂತದ ಔಷಧಿ Ibuprofen ಕೊರೊನಾ ರೋಗಿಗಳ ಉಸಿರಾಟದ ಸಮಸ್ಯೆಯನ್ನು ಸುಧಾರಿಸುತ್ತದೆ ಎಂದು ಲಂಡನ್ ಗೈಸ್ ಮತ್ತು ಸೇಂಟ್ ಥಾಮಸ್ ಆಸ್ಪತ್ರೆ ಮತ್ತು ಕಿಂಗ್ಸ್ ಕಾಲೇಜಿನ ವೈದ್ಯರ ತಂಡ ನಂಬಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...