alex Certify ಗುಡ್‌ ನ್ಯೂಸ್: ಮಾರಕ ಕರೋನಾ ಸೋಂಕಿಗೆ ಸಿದ್ದವಾಯ್ತು ಲಸಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗುಡ್‌ ನ್ಯೂಸ್: ಮಾರಕ ಕರೋನಾ ಸೋಂಕಿಗೆ ಸಿದ್ದವಾಯ್ತು ಲಸಿಕೆ

ಕೊರೊನಾ ವೈರಸ್ ಅಬ್ಬರದ ಮಧ್ಯೆ ಅಮೆರಿಕಾ, ಬ್ರಿಟನ್ ನಂತ್ರ ಇಟಲಿ ನೆಮ್ಮದಿ ಸುದ್ದಿಯೊಂದನ್ನು ನೀಡಿದೆ. ಇಟಲಿ ಕೊರೊನಾಗೆ ಲಸಿಕೆ ಕಂಡು ಹಿಡಿದಿರುವುದಾಗಿ ಹೇಳಿದೆ. ಕೊರೊನಾ ಸೋಂಕು ತಡೆಗೆ ಲಸಿಕೆ ಕಂಡು ಹಿಡಿದಿರುವುದಾಗಿ ಅಲ್ಲಿನ ಸರ್ಕಾರ ಹೇಳಿದೆ.

ಮಾಹಿತಿ ಪ್ರಕಾರ ರೋಮ್‌ನ ಸ್ಪಲಾಂಜಾನಿ ಆಸ್ಪತ್ರೆಯಲ್ಲಿ ಈ ಬಗ್ಗೆ ಪರೀಕ್ಷೆ ಮಾಡಲಾಗಿದೆ. ಇಲಿಗಳ ಮೇಲೆ ಪ್ರಯೋಗ ನಡೆದಿದೆ. ಇದು ಮನುಷ್ಯರ ಮೇಲೂ ಪರಿಣಾಮ ಬೀರಲಿದೆ ಎಂದು ಸಂಶೋಧಕರು ಹೇಳಿದ್ದಾರೆ. ಈ ಹಿಂದೆ ಇಸ್ರೇಲ್ ರಕ್ಷಣಾ ಸಚಿವ ನಫ್ತಾಲಿ ಬೆನೆಟ್ ಲಸಿಕೆ ಕಂಡು ಹಿಡಿದಿರುವ ಬಗ್ಗೆ ಹೇಳಿದ್ದರು. ಬೆನೆಟ್, ಕೊರೊನಾ ವೈರಸ್‌ಗೆ ಲಸಿಕೆಯನ್ನು ಸಂಸ್ಥೆ ಸಿದ್ಧಪಡಿಸಿದೆ. ಲಸಿಕೆ ಪೇಟೆಂಟ್ ಮತ್ತು ಉತ್ಪಾದನಾ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಎಂದಿದ್ದರು.

ಅನೇಕ ದೇಶಗಳಲ್ಲಿ ಕೊರೊನಾಗೆ ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಡೆದಿದೆ. ಅನೇಕ ಸಂಶೋಧಕರು ಈಗಾಗಲೇ ಕೊನೆ ಹಂತ ತಲುಪಿದ್ದು, ಆಗಸ್ಟ್-ಸೆಪ್ಟೆಂಬರ್ ವೇಳೆಗೆ ಲಸಿಕೆ ಲಭ್ಯವಾಗಲಿದೆ ಎನ್ನುತ್ತಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...