ಮೊನ್ನೆ ಮೊನ್ನೆವರೆಗೂ ಕರಿಯರು ಮತ್ತು ಬಿಳಿಯರ ನಡುವಿನ ಅಗ್ನಿಕುಂಡವಾಗಿದ್ದ ಅಮೆರಿಕಾದಲ್ಲೀಗ, ವೈಷಮ್ಯ ಮರೆತು ಹೊಂದಿ ಬಾಳುವ ವಾತಾವರಣ ಸೃಷ್ಟಿಯಾಗುತ್ತಿದೆ.
ಓಹಿಯೋ ನಗರದ ಶಾಕೆರ್ ಹೈಟ್ಸ್ ಅಪಾರ್ಟ್ ಮೆಂಟ್ ನ ಉದ್ಯಾನದಲ್ಲಿ ಆಟವಾಡುತ್ತಿದ್ದ ಮಕ್ಕಳನ್ನು ಕಂಡು ಕೆಂಡಾಮಂಡಲರಾಗಿದ್ದ ವೆಂಡಿ ಬ್ರೌನ್ ಎಂಬವರು, ಪೊಲೀಸರಿಗೆ ದೂರವಾಣಿ ಕರೆ ಮಾಡಿ ದೂರು ನೀಡಿದರು.
ಸ್ಥಳಕ್ಕೆ ಬಂದ ಪೊಲೀಸರನ್ನ ಕಂಡ ಚೆಂಡಾಟ ಆಡುತ್ತಿದ್ದ ಮಕ್ಕಳು ಬೆಚ್ಚಿಬಿದ್ದರು.
ಕೊನೆಗೆ ಪೊಲೀಸರೂ ಮಕ್ಕಳೊಂದಿಗೆ ಕೂಡಿ ಆಡಿದರು. ಇನ್ ಸ್ಟಾಗ್ರಾಮ್ ನಲ್ಲಿ ಈ ವಿಡಿಯೋ ಜನಪ್ರಿಯವಾಗಿದೆ.
https://www.instagram.com/p/CBq33pFB6ef/?utm_source=ig_embed