ದಕ್ಷಿಣ ಯಾರ್ಕ್ಷೈರ್ನ ಡಾನ್ ಕಾಸ್ಟರ್ನಲ್ಲಿರುವ ಪೊಲೀಸರು ಬುದ್ಧಮಾಂದ್ಯ ಬಾಲಕಿಯನ್ನ ಬಂಧಿಸುವ ಮೂಲಕ ಆಕೆಗೆ ಕ್ರಿಸ್ಮಸ್ ಉಡುಗೊರೆ ನೀಡಿದ್ದಾರೆ.
ಎಮಿಲಿ ರಿಚರ್ಡ್ಸನ್ ನಿವಾಸಕ್ಕೆ ಆಗಮಿಸಿದ ಪೊಲೀಸರು ಜೀಪ್ನ ನೀಲಿ ಬಣ್ಣದ ದೀಪವನ್ನ ಬೆಳಗುವ ಮೂಲಕ ಸೈರನ್ ಹೊಡೆದರು. 15 ವರ್ಷದ ಬಾಲಕಿಗೆ ಪೊಲೀಸ್ ಕಾರುಗಳಂದ್ರೆ ತುಂಬಾನೇ ಇಷ್ಟವಂತೆ. ಹೀಗಾಗಿ ಆಕೆಯ ಆಸೆಯನ್ನ ಪೊಲೀಸರು ತೀರಿಸಿದ್ದಾರೆ.
ಅನಾರೋಗ್ಯ ಕಾರಣದಿಂದ ಎಮಿಲಿ ತನ್ನ ಜೀವನದ ಏಳು ಕ್ರಿಸ್ಮಸ್ಗಳನ್ನ ಆಸ್ಪತ್ರೆಯಲ್ಲೇ ಕಳೆದಿದ್ದಾಳೆ. ಸಾಂಕ್ರಾಮಿಕ ರೋಗ ಆರಂಭವಾದ ಹಿನ್ನೆಲೆ ಈಕೆಯನ್ನ ಮನೆಗೆ ಕರೆತರಲಾಗಿತ್ತು. ಹೀಗಾಗಿ ಆಕೆಯ ಕ್ರಿಸ್ಮಸ್ ಹಬ್ಬವನ್ನ ಇನ್ನಷ್ಟು ಮೆರಗುಗೊಳಿಸಲು ಪೋಷಕರು ನಿರ್ಧರಿಸಿದ್ದರು.
ದಕ್ಷಿಣ ಯಾರ್ಕ್ಶೈರ್ನ ಪೊಲೀಸರಿಗೆ ತಮ್ಮ ಮಗಳಿಗೆ ಪೊಲೀಸ್ ಜೀಪುಗಳ ಮೇಲಿರುವ ಗೀಳಿನ ಬಗ್ಗೆ ಪೋಷಕರು ಹೇಳಿಕೊಂಡಿದ್ದಾರೆ. ಪೋಷಕರ ಮನವಿಗೆ ಸ್ಪಂದಿಸಿದ ಪೊಲೀಸರು ಬಾಲಕಿಯ ಆಸೆಯನ್ನ ಈಡೇರಿಸಿದ್ದಾರೆ.