alex Certify ಜ್ಯುರಾಸಿಕ್​ ಪಾರ್ಕ್​ ರೆಸಾರ್ಟ್​ ಬಳಿ ಡ್ರಾಗನ್​ ದಾಳಿಗೊಳಗಾದ ಕಾರ್ಮಿಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜ್ಯುರಾಸಿಕ್​ ಪಾರ್ಕ್​ ರೆಸಾರ್ಟ್​ ಬಳಿ ಡ್ರಾಗನ್​ ದಾಳಿಗೊಳಗಾದ ಕಾರ್ಮಿಕ

ಇಂಡೋನೇಷಿಯಾದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ವಿವಾದಿತ ಜ್ಯುರಾಸಿಕ್​ ಪಾರ್ಕ್​ ರೆಸಾರ್ಟ್​ನಲ್ಲಿ ಕೊಮೊಡೋ ಡ್ರ್ಯಾಗನ್​ ಹಲ್ಲೆಗೊಳಗಾಗಿದ್ದ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದಾನೆ.

ಡೇಲಿಮೇಲ್​ ವರದಿ ಪ್ರಕಾರ ಗಂಭೀರವಾಗಿ ಗಾಯಗೊಂಡಿರುವ ಕಾರ್ಮಿಕನನ್ನ ಎಲಿಯಾಸ್​ ಅಗಾಸ್​ ಎಂದು ಗುರುತಿಸಲಾಗಿದೆ. ಸುಮಾರು 48 ದಶಕೋಟಿ ಮೌಲ್ಯದಲ್ಲಿ ಈ ಪಾರ್ಕ್​ನ್ನ ನಿರ್ಮಾಣ ಮಾಡಲಾಗುತ್ತಿದೆ. ಜ್ಯುರಾಸಿಕ್​ ಪಾರ್ಕ್ ಸಿನಿಮಾದಿಂದ ಸ್ಪೂರ್ತಿ ಪಡೆದು ಈ ಪಾರ್ಕ್ ನಿರ್ಮಾಣ ಕಾರ್ಯಕ್ಕೆ ಕೈ ಹಾಕಲಾಗಿತ್ತು.

ಡ್ರ್ಯಾಗನ್,​​ ಕಾರ್ಮಿಕನ ದೇಹದ ಹಲವಾರು ಭಾಗಗಳನ್ನ ಹರಿದು ಹಾಕಿದ್ದರಿಂದ 46 ವರ್ಷದ ಕಾರ್ಮಿಕನನ್ನ ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ.

ಕೊಮೊಡೊ ಡ್ರ್ಯಾಗನ್​​ಗಳು ಅಳಿವಿನಂಚಿನಲ್ಲಿರುವ ಪ್ರಬೇಧವಾಗಿದ್ದು ವಿಶ್ವದ ಅತಿದೊಡ್ಡ ಹಲ್ಲಿಗಳಾಗಿವೆ. ಬೆರಳಿಣಿಕೆಯಷ್ಟಿರುವ ಈ ಕೊಮೊಡೋ ಡ್ರ್ಯಾಗನ್​​ಗಳು ಇಂಡೋನೇಷಿಯಾದಲ್ಲಿ ದ್ವೀಪದಲ್ಲಿ ಕಾಣಸಿಗುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...