ಇಂಡೋನೇಷಿಯಾದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ವಿವಾದಿತ ಜ್ಯುರಾಸಿಕ್ ಪಾರ್ಕ್ ರೆಸಾರ್ಟ್ನಲ್ಲಿ ಕೊಮೊಡೋ ಡ್ರ್ಯಾಗನ್ ಹಲ್ಲೆಗೊಳಗಾಗಿದ್ದ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದಾನೆ.
ಡೇಲಿಮೇಲ್ ವರದಿ ಪ್ರಕಾರ ಗಂಭೀರವಾಗಿ ಗಾಯಗೊಂಡಿರುವ ಕಾರ್ಮಿಕನನ್ನ ಎಲಿಯಾಸ್ ಅಗಾಸ್ ಎಂದು ಗುರುತಿಸಲಾಗಿದೆ. ಸುಮಾರು 48 ದಶಕೋಟಿ ಮೌಲ್ಯದಲ್ಲಿ ಈ ಪಾರ್ಕ್ನ್ನ ನಿರ್ಮಾಣ ಮಾಡಲಾಗುತ್ತಿದೆ. ಜ್ಯುರಾಸಿಕ್ ಪಾರ್ಕ್ ಸಿನಿಮಾದಿಂದ ಸ್ಪೂರ್ತಿ ಪಡೆದು ಈ ಪಾರ್ಕ್ ನಿರ್ಮಾಣ ಕಾರ್ಯಕ್ಕೆ ಕೈ ಹಾಕಲಾಗಿತ್ತು.
ಡ್ರ್ಯಾಗನ್, ಕಾರ್ಮಿಕನ ದೇಹದ ಹಲವಾರು ಭಾಗಗಳನ್ನ ಹರಿದು ಹಾಕಿದ್ದರಿಂದ 46 ವರ್ಷದ ಕಾರ್ಮಿಕನನ್ನ ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ.
ಕೊಮೊಡೊ ಡ್ರ್ಯಾಗನ್ಗಳು ಅಳಿವಿನಂಚಿನಲ್ಲಿರುವ ಪ್ರಬೇಧವಾಗಿದ್ದು ವಿಶ್ವದ ಅತಿದೊಡ್ಡ ಹಲ್ಲಿಗಳಾಗಿವೆ. ಬೆರಳಿಣಿಕೆಯಷ್ಟಿರುವ ಈ ಕೊಮೊಡೋ ಡ್ರ್ಯಾಗನ್ಗಳು ಇಂಡೋನೇಷಿಯಾದಲ್ಲಿ ದ್ವೀಪದಲ್ಲಿ ಕಾಣಸಿಗುತ್ತವೆ.