ಕಾಮಿಡಿ ವೈಲ್ಡ್ ಲೈಫ್ ಫೋಟೋಗ್ರಫಿ ಸ್ಪರ್ಧೆಯ ವಿಜೇತರ ಪಟ್ಟಿ ಘೋಷಣೆಯಾಗಿದೆ. ಸ್ಪರ್ಧೆಯ ಮೊದಲ ಸ್ಥಾನ ಆಮೆ ಫೋಟೋಗೆ ದೊರಕಿದೆ. ಆಸ್ಟ್ರೇಲಿಯಾದ ಮಾರ್ಕ್ ಫಿಟ್ಜ್ಪ್ಯಾಟ್ರಿಕ್ ಎಂಬವರು ಸಮುದ್ರದಲ್ಲಿದ್ದ ಈ ಆಮೆಯ ಫೋಟೋವನ್ನ ಸೆರೆಹಿಡಿದಿದ್ದಾರೆ.
ತುಂಬಾ ಗಂಭೀರವಾಗಿ ಕ್ಯಾಮರಾ ನೋಡ್ತಿರೋ ಆಮೆಯ ಈ ಫೋಟೋ ನೋಡಿದ್ರೆ ನಗು ಬರೋದು ಗ್ಯಾರಂಟಿ.
ರಾಕೋನ್ ಪ್ರಾಣಿಯ ಫೋಟೋ ಸೆರೆ ಹಿಡಿದ ಚಾರ್ಲೆಡೇವಿಡ್ ಸನ್ ಕೂಡ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಚಿತ್ರದಲ್ಲಿ ರಾಕೋನ್ ನ ಕಾಲುಗಳಷ್ಟೇ ಕಾಣುತ್ತಿದೆ . ಇನ್ನೇನು ಏಳುವ ಸಮಯವಾಯ್ತು ಅಂತಾ ಈ ಚಿತ್ರಕ್ಕೆ ಕ್ಯಾಪ್ಶನ್ ಕೊಡಲಾಗಿದೆ.
ಟಿಮ್ ಹರ್ನ್ ಎಂಬವರು ಹೈಡ್ & ಸಿಕ್ ಎಂಬ ಶೀರ್ಷಿಕೆಯಡಿಯಲ್ಲಿ ಮಿಡತೆ ಜಾತಿಯ ಕೀಟದ ಚಿತ್ರಕ್ಕೆ ಪ್ರಶಸ್ತಿ ಪಡೆದಿದ್ದಾರೆ. ರೊನಾಲ್ಡ್ ಕ್ರ್ಯಾನಿಡ್ಜ್ ಎಂಬವರು ಹಾಡುತ್ತಿರುವ ಅಳಿಲಿನ ಫೋಟೋ ಸೆರೆಹಿಡಿದು ಕಾಮಿಡಿ ಅವಾರ್ಡ್ ಪಡೆದಿದ್ದಾರೆ.