
ಸಿಎನ್ಎನ್ ವರದಿಗಾರ್ತಿ ಸಾರಾ ಸಿಡ್ನರ್ ಲಾಸ್ ಏಂಜಲೀಸ್ನಲ್ಲಿ ಜನವರಿ 12ರಂದು ಕೋವಿಡ್ 19ನಿಂದ ತಾಯಿ ಹಾಗೂ ಮಲತಂದೆಯ ಕಳೆದುಕೊಂಡ ಕುಟುಂಬದ ಬಗ್ಗೆ ವರದಿ ಮಾಡುತ್ತಿದ್ದ ವೇಳೆ ಭಾವುಕರಾಗಿದ್ದಾರೆ.
ಇದು ನಾನು ಇದ್ದ 10ನೇ ಆಸ್ಪತ್ರೆ ಎಂದು ಹೇಳಿದ ಸಿಡ್ನರ್ ಅಳಲು ಆರಂಭಿಸಿದ್ರು. ಬಳಿಕ ಅವರು ನಿರೂಪಕಿ ಅಲಿಸಿನ್ ಕ್ಯಾಮರೋಟಾ ಬಳಿ ಕ್ಷಮೆ ಯಾಚಿಸಿದ್ರು. ಇಂತಹ ಘಟನೆಗಳ ಬಳಿಕ ಆ ಕುಟುಂಬ ಹೇಗೆ ಬದುಕುತ್ತದೆ ಎಂದು ಹೇಳಿಕೊಂಡು ವರದಿಗಾರ್ತಿ ಅಳುತ್ತಿದ್ದ ರೀತಿ ಕಂಡು ನೆಟ್ಟಿಗರ ಕಣ್ಣಾಲಿಗಳೂ ಒದ್ದೆಯಾಗಿವೆ.