ನವೆಂಬರ್ 19ರಂದು ಜಗತ್ತಿನಾದ್ಯಂತ ಪುರುಷರ ದಿನವೆಂದು ಆಚರಿಸಲಾಗುತ್ತದೆ. ಜೀವನದ ವಿವಿಧ ಮಜಲುಗಳಲ್ಲಿ ಪುರುಷರ ಕೊಡುಗೆಗಳನ್ನು ಇದೇ ವೇಳೆ ಸ್ಮರಿಸಲಾಗುತ್ತದೆ.
ಪುರುಷರ ಬಗೆಗೆ ಸಾಕಷ್ಟು ಪೂರ್ವಾಗ್ರಹಗಳಿದ್ದು, ಒಬ್ಬ ವ್ಯಕ್ತಿಯನ್ನು ಪುರುಷ ಎಂದು ಕರೆಯಬೇಕಾದಲ್ಲಿ ಆತ ಈ ಪೂರ್ವಾಗ್ರಹಗಳ ಆಧಾರದಲ್ಲಿ, ಆತ ಇಂಥದ್ದೇ ಬಟ್ಟೆಗಳನ್ನು ಹಾಕಿಕೊಳ್ಳಬೇಕೆಂಬ ಅಲಿಖಿತ ನಿಯಮಾವಳಿಗಳೆಲ್ಲಾ ಇವೆ. ಇವುಗಳನ್ನು ಮೀರಿದ ವೇಳೆ, ಸಮಾಜದಲ್ಲಿ ಒಂದು ರೀತಿಯ ಶೇಮಿಂಗ್ ಎದುರಿಸಬೇಕಾಗುತ್ತದೆ.
ಇದೀಗ ಈ ಟ್ರೆಂಡ್ ಮುರಿಯಲು ಮುಂದಾಗಿರುವ ಬ್ರಿಟಿಷ್ ಗಾಯಕ ಹ್ಯಾರಿ ಸ್ಟೈಲ್ಸ್ ’ವೋಗ್’ ನಿಯತಕಾಲಿಕೆಯ ಮುಖಪುಟದಲ್ಲಿ ಸ್ತ್ರೀಯರ ಉಡುಪಿನಲ್ಲಿ ಮಿಂಚಿದ ಮೊದಲ ಪುರುಷರಾಗಿದ್ದಾರೆ. ಹೆಂಗಸರಿಗೆ ಮಾತ್ರ ಎನ್ನಲಾಗುವ ಅನೇಕ ವಸ್ತ್ರಗಳಲ್ಲಿ ಮಿಂಚಿರುವ ಸ್ಟೈಲ್ಸ್ ಅವರ ಈ ಚಿತ್ರಗಳು ಅಂತರ್ಜಾಲದಲ್ಲಿ ವೈರಲ್ ಆಗಿವೆ.