
ಶ್ವಾನಗಳು ಮನುಷ್ಯನ ಪ್ರೀತಿಯನ್ನ ಗಳಿಸೋಕೆ ಒಂದಿಲ್ಲೊಂದು ಪ್ರಯತ್ನವನ್ನ ಮಾಡ್ತಾನೇ ಇರ್ತಾವೆ. ಹಾಗಂತ ಎಲ್ಲಾ ಶ್ವಾನಗಳ ಬುದ್ಧಿ ಒಂದೇ ತರ ಎಂದು ಹೇಳಲಾಗದು. ಕೆಲವೊಂದು ನಾಯಿಗಳು ಕೀಟಲೆ ಸ್ವಭಾವದಾಗಿದ್ದರೆ ಇನ್ನೂ ಕೆಲ ಶ್ವಾನಗಳು ಸೌಮ್ಯ ಸ್ವಭಾವದಾಗಿರುತ್ತದೆ.
ಸೋಶಿಯಲ್ ಮೀಡಿಯಾದಲ್ಲಿ ತನ್ನ ಸೌಮ್ಯ ಸ್ವಭಾವದ ಮೂಲಕವೇ ಶ್ವಾನವೊಂದು ನೆಟ್ಟಿಗರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.
ವಿಡಿಯೋದಲ್ಲಿ ಶ್ವಾನದ ಮಾಲೀಕೆ ತನ್ನ ನಾಯಿಯ ಕೆಲ ಗುಣಗಳನ್ನ ವರ್ಣನೆ ಮಾಡುತ್ತಾ ಹೋಗುತ್ತಾಳೆ. ಈ ಶ್ವಾನಕ್ಕೆ ಪುಟ್ಟ ದಿಂಬಿನ ಮೇಲಿರುವ ಪ್ರೀತಿಯಿಂದ ಹಿಡಿದು ಅದರ ಫೇವರಿಟ್ ಆಟಿಗೆ ಸಾಮಗ್ರಿಯವರೆಗೂ ಆಕೆ ವಿವರಣೆ ನೀಡಿದ್ದಾಳೆ . ಈ ವಿಡಿಯೋ ಸಾವಿರಗಟ್ಟಲೇ ಲೈಕ್ಸ್ಗಳನ್ನ ಸಂಪಾದಿಸಿದೆ. ಈ ಮೂಕ ಪ್ರಾಣಿಯ ಶಿಸ್ತಿನ ಜೀವನಕ್ಕೆ ನೆಟ್ಟಿಗರು ಶಹಬ್ಬಾಸ್ ಅಂತಿದ್ದಾರೆ.