alex Certify ಮನೆಗೆ ಬಾ ಎಂದರೆ ‘ನಾ ಸತ್ತೆ’ ಎನ್ನುತ್ತೆ ಈ ಶ್ವಾನ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಗೆ ಬಾ ಎಂದರೆ ‘ನಾ ಸತ್ತೆ’ ಎನ್ನುತ್ತೆ ಈ ಶ್ವಾನ…!

ಅಮೇರಿಕಾ: ಮನೆಗೆ ಬರಲು ಇಷ್ಟವಿಲ್ಲದ ಸಾಕು ನಾಯಿ ರಸ್ತೆಯ ಮೇಲೆ ಮಲಗಿ ಸತ್ತಂತೆ ನಾಟಕವಾಡುವ ಅಮೇರಿಕಾದ ವಿಡಿಯೋವೊಂದು ನೆಟ್ಟಿಗರ ಪ್ರೀತಿಗೆ ಪಾತ್ರವಾಗಿದೆ.

ಬ್ಲೂ ಎಂ ಹೆಸರಿನ ನಾಯಿ ತನ್ನ ಒಡತಿ ಕ್ಯಾಡಿ ಮ್ಯಾಕ್ನೆರ್ನಿ ಅವರ ಜತೆ ವಿಹಾರಕ್ಕೆ ಹೋಗುತ್ತದೆ. ಮನೆಗೆ ಹೋಗುವ ಸಮಯವಾಯಿತು ಬಾ ಎಂದು ಕರೆದಾಗಲೆಲ್ಲ‌ ಸಪ್ಪೆ ಮೋರೆ ಹಾಕಿ ತಿರುಗಿ ಕೂರುತ್ತದೆ. ಇನ್ನೂ ಒತ್ತಾಯ ಮಾಡಿದರೆ ಸತ್ತಂತೆ ನಾಟಕವಾಡುತ್ತದೆ.

ಹಲವು ದಿನಗಳ ಈ ಸನ್ನಿವೇಶವನ್ನು ಸೇರಿಸಿ‌ ಮಾಡಿದ ವಿಡಿಯೋವನ್ನು ಕಿಟ್ಟರ್ ಕ್ಲಬ್ ಎಂಬುವವರು ತಮ್ಮ ಯೂ ಟ್ಯೂಬ್ ಚಾನಲ್ ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.

ಬೇರೆ ಅಪಾಯಕಾರಿ ಪ್ರಾಣಿಗಳಿಂದ‌ ರಕ್ಷಿಸಿಕೊಳ್ಳಲು ನಾಯಿಗಳು ಸತ್ತಂತೆ ನಾಟಕವಾಡುವ ಸಾಕಷ್ಟು ವಿಡಿಯೋಗಳು ಈಗಾಗಲೇ ಬಂದಿವೆ. ನಾಯಿಯೊಂದು ಸತ್ತಂತೆ ನಾಟಕವಾಡಿ ಸಿಂಹದಿಂದ ಬಚಾವಾಗುವ ವಿಡಿಯೋ ಈ ಹಿಂದೆ ಬಂದಿತ್ತು. ಇಷ್ಟೇ ಅಲ್ಲ, ತಮಗಿಷ್ಟವಿಲ್ಲದ ಕಾರ್ಯ ಮಾಡುವುದನ್ನು ತಪ್ಪಿಸಿಕೊಳ್ಳಲು ಪ್ರಾಣಿಗಳು ಇಂಥ ಕಾರ್ಯ ಮಾಡುತ್ತವೆ ಎಂದು ನೆಟ್ಟಿಗರು ವಿಶ್ಲೇಷಿಸಿದ್ದಾರೆ.‌

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...