alex Certify ಬರೋಬ್ಬರಿ 6 ತಿಂಗಳುಗಳ ಕಾಲ ಕೊರೊನಾದಿಂದ ಬಳಲಿದ ವ್ಯಕ್ತಿ ಕೊನೆಗೂ ಆಸ್ಪತ್ರೆಯಿಂದ ಡಿಸ್ಚಾರ್ಜ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರೋಬ್ಬರಿ 6 ತಿಂಗಳುಗಳ ಕಾಲ ಕೊರೊನಾದಿಂದ ಬಳಲಿದ ವ್ಯಕ್ತಿ ಕೊನೆಗೂ ಆಸ್ಪತ್ರೆಯಿಂದ ಡಿಸ್ಚಾರ್ಜ್

ಕೊರೊನಾ ವೈರಸ್​ ಸಾಂಕ್ರಾಮಿಕವು ನಾವು ಹಿಂದೆಂದೂ ಊಹಿಸದ ರೀತಿಯಲ್ಲಿ ಜಗತ್ತನ್ನ ಬದಲಾಯಿಸಿಬಿಟ್ಟಿದೆ. ಆದರೆ ಈ ವಿಚಿತ್ರವಾದ ಜೀವನದಲ್ಲಿ ಬದುಕೋಕೆ ಶುರು ಮಾಡಿ 12 ತಿಂಗಳುಗಳೇ ಕಳೆಯುತ್ತಾ ಬಂದರೂ ಸಹ ಕೊರೊನಾ ವೈರಸ್​ ಅಬ್ಬರ ಮಾತ್ರ ಕಡಿಮೆಯಾಗಿಲ್ಲ.

ಯುವಕರು ಕೊರೊನಾದಿಂದ ವೇಗವಾಗಿ ಚೇತರಿಸಿಕೊಂಡರೆ ವೃದ್ಧರು ಕೊರೊನಾದಿಂದ ಚೇತರಿಕೆ ಕಾಣಲು ಕೊಂಚ ಹೆಚ್ಚಿಗೆ ಸಮಯವನ್ನೇ ತೆಗೆದುಕೊಳ್ಳುತ್ತಾರೆ. ಬ್ರಿಟನ್​ ಮೂಲದ 57 ವರ್ಷದ ವ್ಯಕ್ತಿ ವರ್ಷದ ಆರಂಭದಲ್ಲೇ ಕೊರೊನಾದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅದೃಷ್ಟವಶಾತ್​ ಕ್ರಿಸ್​ಮಸ್​ ಹಬ್ಬಕ್ಕೂ ಮೊದಲೇ ಮನೆಗೆ ವಾಪಸ್ಸಾಗಿದ್ದಾರೆ.

57 ವರ್ಷದ ಈ ವ್ಯಕ್ತಿ ಕೊರೊನಾದಿಂದಾಗಿ ಬರೋಬ್ಬರಿ 222 ದಿನಗಳ ಕಾಲ ಆಸ್ಪತ್ರೆಯಲ್ಲಿ ಕಳೆದಿದ್ದಾರೆ. ಇವರು ಅಧಿಕೃತವಾಗಿ ಬ್ರಿಟನ್​ನ ದೀರ್ಘಕಾಲದ ಕೊರೊನಾ ರೋಗಿ ಎಂಬ ಹೆಸರಿಗೆ ಪಾತ್ರರಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...