ಕೊರೊನಾ ವೈರಸ್ ಸಾಂಕ್ರಾಮಿಕವು ನಾವು ಹಿಂದೆಂದೂ ಊಹಿಸದ ರೀತಿಯಲ್ಲಿ ಜಗತ್ತನ್ನ ಬದಲಾಯಿಸಿಬಿಟ್ಟಿದೆ. ಆದರೆ ಈ ವಿಚಿತ್ರವಾದ ಜೀವನದಲ್ಲಿ ಬದುಕೋಕೆ ಶುರು ಮಾಡಿ 12 ತಿಂಗಳುಗಳೇ ಕಳೆಯುತ್ತಾ ಬಂದರೂ ಸಹ ಕೊರೊನಾ ವೈರಸ್ ಅಬ್ಬರ ಮಾತ್ರ ಕಡಿಮೆಯಾಗಿಲ್ಲ.
ಯುವಕರು ಕೊರೊನಾದಿಂದ ವೇಗವಾಗಿ ಚೇತರಿಸಿಕೊಂಡರೆ ವೃದ್ಧರು ಕೊರೊನಾದಿಂದ ಚೇತರಿಕೆ ಕಾಣಲು ಕೊಂಚ ಹೆಚ್ಚಿಗೆ ಸಮಯವನ್ನೇ ತೆಗೆದುಕೊಳ್ಳುತ್ತಾರೆ. ಬ್ರಿಟನ್ ಮೂಲದ 57 ವರ್ಷದ ವ್ಯಕ್ತಿ ವರ್ಷದ ಆರಂಭದಲ್ಲೇ ಕೊರೊನಾದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅದೃಷ್ಟವಶಾತ್ ಕ್ರಿಸ್ಮಸ್ ಹಬ್ಬಕ್ಕೂ ಮೊದಲೇ ಮನೆಗೆ ವಾಪಸ್ಸಾಗಿದ್ದಾರೆ.
57 ವರ್ಷದ ಈ ವ್ಯಕ್ತಿ ಕೊರೊನಾದಿಂದಾಗಿ ಬರೋಬ್ಬರಿ 222 ದಿನಗಳ ಕಾಲ ಆಸ್ಪತ್ರೆಯಲ್ಲಿ ಕಳೆದಿದ್ದಾರೆ. ಇವರು ಅಧಿಕೃತವಾಗಿ ಬ್ರಿಟನ್ನ ದೀರ್ಘಕಾಲದ ಕೊರೊನಾ ರೋಗಿ ಎಂಬ ಹೆಸರಿಗೆ ಪಾತ್ರರಾಗಿದ್ದಾರೆ.