alex Certify ʼಕೊರೊನಾʼ ಆತಂಕದ ನಡುವೆ ಇಲ್ಲಿದೆ ನೆಮ್ಮದಿ ಸುದ್ದಿ: ಸೋಂಕು ಇಲ್ಲದಂತೆ ಮಾಡುತ್ತಂತೆ ಈ ಮಾತ್ರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೊರೊನಾʼ ಆತಂಕದ ನಡುವೆ ಇಲ್ಲಿದೆ ನೆಮ್ಮದಿ ಸುದ್ದಿ: ಸೋಂಕು ಇಲ್ಲದಂತೆ ಮಾಡುತ್ತಂತೆ ಈ ಮಾತ್ರೆ

ಕೊರೊನಾ ವೈರಸ್ ಲಸಿಕೆ ಮತ್ತು ಔಷಧಿಗಾಗಿ ವಿಶ್ವಾದ್ಯಂತ ಸಂಶೋಧನೆ ನಡೆಯುತ್ತಿದೆ. ಎಲ್ಲಾ ದೇಶಗಳ ವಿಜ್ಞಾನಿಗಳು ಔಷಧಿ ಮತ್ತು ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಡೆಸುತ್ತಿದ್ದಾರೆ. ಇದ್ರ ಬಗ್ಗೆ ಹೊಸ ಮಾಹಿತಿಗಳು ನಿರಂತರವಾಗಿ ಹೊರಬರುತ್ತಿವೆ. ಕೊಲೆಸ್ಟ್ರಾಲ್ ಕಡಿಮೆ ಮಾಡುವ ಔಷಧ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಬಲ್ಲದು ಎಂದು ಈಗ ಇಬ್ಬರು ವಿಜ್ಞಾನಿಗಳು ಅಧ್ಯಯನದ ನಂತರ ಹೇಳಿದ್ದಾರೆ.

ಜೆರುಸಲೆಮೆನ್ ಹೀಬ್ರೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಯಾಕೋವ್ ನಹ್ಮಿಯಾಸ್ ಮತ್ತು ನ್ಯೂಯಾರ್ಕ್ ಐಕಾನ್ ಸ್ಕೂಲ್ ಆಫ್ ಮೆಡಿಸಿನ್‌ನ ಡಾ. ಬೆಂಜಮಿನ್ ಟೆನೋವರ್ ಕಳೆದ ಮೂರು ತಿಂಗಳಿನಿಂದ ಕೊರೊನಾ ಔಷಧವನ್ನು ಅಧ್ಯಯನ ಮಾಡುತ್ತಿದ್ದಾರೆ. ಪ್ರಯೋಗಾಲಯದಲ್ಲಿ ನಡೆಸಿದ ಅಧ್ಯಯನದ ಸಮಯದಲ್ಲಿ, ಕೊಲೆಸ್ಟ್ರಾಲ್ ಕಡಿಮೆ ಮಾಡುವ ಔಷಧಿ ಬಹಳ ಸಕಾರಾತ್ಮಕ ಫಲಿತಾಂಶಗಳನ್ನು ನೀಡಿತು ಎಂದವರು ಹೇಳಿದ್ದಾರೆ.

ಅಧ್ಯಯನದ ಸಮಯದಲ್ಲಿ, ಪ್ರೊಫೆಸರ್ ನಹ್ಮಿಯಾಸ್ ಮತ್ತು ಡಾ. ಟೆನೋವರ್ ಅವರು ಕೊರೊನಾ ವೈರಸ್, ರೋಗಿಯ ಶ್ವಾಸಕೋಶದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ತಮ್ಮ ಗಮನವನ್ನು ಕೇಂದ್ರೀಕರಿಸಿದರು.

ಅಧ್ಯಯನದ ಪ್ರಕಾರ, ಈ ಔಷಧದ ಬಳಕೆಯು ಶ್ವಾಸಕೋಶದ ಕೊಬ್ಬನ್ನು ಸುಡುತ್ತದೆ.  ಇದರಿಂದಾಗಿ ಕೊರೊನಾ ವೈರಸ್ ದುರ್ಬಲಗೊಳ್ಳುತ್ತದೆ.  ಸಂತಾನೋತ್ಪತ್ತಿ ಮಾಡಲು ಸಾಧ್ಯವಾಗುವುದಿಲ್ಲ. ಲ್ಯಾಬ್ ಅಧ್ಯಯನದ ಸಮಯದಲ್ಲಿ ಕೇವಲ 5 ದಿನಗಳ ಚಿಕಿತ್ಸೆಯಲ್ಲಿ ವೈರಸ್ ಕಣ್ಮರೆಯಾಗಿರುವುದು ಪತ್ತೆಯಾಗಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...