ಕೊರೋನಾ ವೈರಸ್ ಕಾಲಘಟ್ಟದಲ್ಲಿ ಅಮೆರಿಕ maine ರಾಜ್ಯವನ್ನು ಸೋಂಕು ಮುಕ್ತವಾಗಿ ಇಡಲು ಯತ್ನಿಸುತ್ತಿರುವ ಡಾಕ್ಟರ್ ನೀರವ್ ಶಾ ಗೌರವಾರ್ಥ ಅಲ್ಲಿನ ಚಾಕಲೇಟ್ ಕಂಪನಿಯೊಂದು, ’ಶಾ ಬಾರ್’ ಹೆಸರಿನಲ್ಲಿ ಹೊಸ ಚಾಕಲೇಟ್ಗಳನ್ನು ಹೊರತಂದಿದೆ. Wilbur’s of Maine Chocolate Confections ಕಂಪನಿ ಈ ಚಾಕಲೇಟ್ಗಳನ್ನು ಹೊರತಂದಿದೆ.
maine ರಾಜ್ಯದ ರೋಗ ನಿಯಂತ್ರಣ ಕೇಂದ್ರದ ನಿರ್ದೇಶಕರಾದ ಡಾ. ಶಾ, ಪ್ರತಿನಿತ್ಯ ತಮ್ಮ ರಾಜ್ಯದ ವೈದ್ಯಕೀಯ ಸಿಬ್ಬಂದಿಯೊಂದಿಗೆ ನಿರಂತರ ಸಂಪರ್ಕ ಸಾಧಿಸುವ ಮೂಲಕ ಸೋಂಕನ್ನು ನಿಯಂತ್ರಣದಲ್ಲಿಟ್ಟಿದ್ದು, ಇಂಥ ಸಂದರ್ಭದಲ್ಲೂ ಸಹ ಸಮಚಿತ್ತರಾಗಿ ಕೆಲಸ ಮಾಡುತ್ತಿದ್ದಾರೆ.
ಇದೀಗ ಅವರ ಫೋಟೋ ಇರುವ ಚಾಕಲೇಟ್ ಬಾರ್ ಒಂದಕ್ಕೆ $2.25 ಬೆಲೆ ಇದ್ದು, ಆರು ಬಾರ್ಗಳ ಪ್ಯಾಕ್ ಅನ್ನು $13.5ಕ್ಕೆ ಮಾರಾಟ ಮಾಡಲಾಗುತ್ತಿದೆ. ಈ ಬಾರ್ಗಳ ರಾಪರ್ಗಳ ಮೇಲೆ ಡಾ. ಶಾ ಅವರ ಫೋಟೋಗಳನ್ನು ಮುದ್ರಿಸಲಾಗಿದೆ.
https://www.facebook.com/WilbursofMaineChocolateConfections/photos/a.10150267891270516/10158334369875516/?type=3
https://www.facebook.com/WilbursofMaineChocolateConfections/posts/10158415937325516