ಜಗತ್ತಿನ ಯಾವುದೇ ಮೂಲೆಗೂ ಕೇವಲ ಎರಡು ಗಂಟೆಗಳ ಒಳಗೆ ವಿಮಾನವನ್ನು ಕರೆದೊಯ್ಯಬಲ್ಲ ಜೆಟ್ ಎಂಜಿನ್ ಒಂದನ್ನು ಅನ್ವೇಷಣೆ ಮಾಡಿರುವುದಾಗಿ ಚೀನೀ ವಿಜ್ಞಾನಿಗಳು ಹೇಳಿಕೊಂಡಿದ್ದಾರೆ.
ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ಪತ್ರಿಕೆಯಲ್ಲಿ ವರದಿಯಾದಂತೆ, ಬೀಜಿಂಗ್ ಸುರಂಗವೊಂದರಲ್ಲಿ ನಡೆಸಲಾದ ಪ್ರಯೋಗದ ವೇಳೇ ಈ ಎಂಜಿನ್ ಭಾರೀ ಶಕ್ತಿ ಹಾಗೂ ಇಂಧನ ಕ್ಷಮತೆಯನ್ನು ತೋರಿದೆ.
ಈ ಎಂಜಿನ್ ಮೂಲಕ ಅನ್ಯ ವಾತಾವರಣೆಕ್ಕೆ ಹೋಗಬಲ್ಲ ವಿಮಾನಗಳನ್ನೂ ಸಹ ಓಡಿಸಬಹುದಾಗಿದ್ದು, ವಿಮಾನವನ್ನು ಅಡ್ಡಡ್ಡವಾಗಿಯೂ ಟೇಕಾಫ್ ಮಾಡಿಸಬಹುದಾಗಿದೆ ಎಂದು ಸಂಶೋಧಕರ ತಂಡ ತಿಳಿಸಿದೆ.
ಜಲಜನಕ ಇಂಧನದಲ್ಲಿ ಚಲಿಸಬಲ್ಲ ಈ ಎಂಜಿನ್‌ನ ವಿನ್ಯಾಸ ಸರಳವಾಗಿದದ್ದು, ಸಿಂಗಲ್ ಸ್ಟೇಜ್ ಕಂಬಷನ್ ಚೇಂಬರ್‌ನಿಂದ ಕೆಲಸ ಮಾಡಬಹುದಾಗಿದೆ ಎಂದು ಬೀಜಿಂಗ್ ಮೂಲದ ಸಂಶೋಧಕರೊಬ್ಬರು ತಿಳಿಸಿದ್ದಾರೆ.