
ಮದುವೆಯಾಗುವ ನಿರ್ಧಾರವನ್ನು ಮುಂದೂಡುವ ಅಥವಾ ರದ್ದು ಮಾಡುವ ಟ್ರೆಂಡ್ ಚೀನಾದ ಯುವಕರಲ್ಲಿ ಸಿಕ್ಕಾಪಟ್ಟೆ ಹೆಚ್ಚುತ್ತಿದೆ. ಕಳೆದ ಆರು ವರ್ಷಗಳ ಅವಧಿಯಲ್ಲಿ ಮೊದಲ ಬಾರಿಗೆ ಮದುವೆಯಾಗುವ ಚೀನೀಯರ ಸಂಖ್ಯೆಲ್ಲಿ 41% ತಗ್ಗಿದೆ.
2013ರಲ್ಲಿ 2.38 ಕೋಟಿ ಚೀನೀಯರು ಹಸೆಮಣೆ ಏರಿದ್ದರೆ 2019ರಲ್ಲಿ 1.39 ಕೋಟಿ ಮಂದಿ ಚೀನೀಯರು ಮದುವೆ ಆಗಿದ್ದಾರೆ ಎಂದು ಚೀನಾದ ರಾಷ್ಟ್ರೀಯ ಸಂಖ್ಯಾಶಾಸ್ತ್ರ ಇಲಾಖೆ ಬಿಡುಗಡೆ ಮಾಡಿರುವ ದತ್ತಾಂಶದಿಂದ ತಿಳಿದು ಬಂದಿದೆ.
ವೇತನದಾರರೇ ಗಮನಿಸಿ..! ಕಡಿಮೆಯಾಗಲಿದೆ ಟೇಕ್ ಹೋಂ ಸ್ಯಾಲರಿ – ಹೆಚ್ಚಾಗಲಿದೆ ಪಿಎಫ್, ಗ್ರಾಚುಟಿ
ಜನಸಂಖ್ಯೆ ಬೆಳವಣಿಗೆಯನ್ನು ನಿಯಂತ್ರಣದಲ್ಲಿ ಇಡಲು ಚೀನಾದ ಸರ್ಕಾರಗಳು ತಂದ ನಿಯಮಗಳ ಕಾರಣ ಈ ಇಳಿಮುಖ ಕಂಡು ಬಂದಿದೆ ಎನ್ನಲಾಗಿದೆ. ಈ ಕಾರಣದಿಂದಾಗಿ ಮದುವೆಯಾಗುವ ವಯಸ್ಸಿನ ಜನರ ಸಂಖ್ಯೆ ಕ್ಷೀಣಿಸುತ್ತಾ ಸಾಗಿದೆ.
ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಹಾಗೂ ಲಿಂಗ ಸಮಾನತೆಯ ಬಗ್ಗೆ ಯುವಕರಿಗೆ ನಂಬಿಕೆ ಇಲ್ಲದೇ ಇರುವುದು ಸಹ ಮದುವೆಯಾಗುವವರ ಸಂಖ್ಯೆ ಕಡಿಮೆಯಾಗಲು ಕಾರಣವಾಗಿದೆ. ಇದು ಈಗ ಚೀನಾ ಸರ್ಕಾರದ ಆತಂಕಕ್ಕೆ ಕಾರಣವಾಗಿದೆ.