ವಿಚಿತ್ರ ಸನ್ನಿವೇಶವೊಂದರಲ್ಲಿ, ಚೀನಾದ ವ್ಯಕ್ತಿಯೊಬ್ಬ ತನ್ನ ಗುದದ್ವಾರದಲ್ಲಿ ಸಿಲುಕಿದ್ದ ಮೀನೊಂದನ್ನು ಸರ್ಜರಿ ಮಾಡಿಸಿಕೊಂಡು ಹೊರ ತೆಗೆಸಿದ್ದಾನೆ. ಚೀನಾದ ಗುವಾಂಗ್ಡಾಂಗ್ ಪ್ರಾಂತ್ಯದಲ್ಲಿ ಈ ಘಟನೆ ಜರುಗಿದೆ.
ಅಕಸ್ಮಾತ್ ಆಗಿ ತಾನು ಮೀನಿನ ಮೇಲೆ ಕುಳಿತಿದ್ದಾಗಿ ಹೇಳಿದ 30 ವರ್ಷದ ಈ ವ್ಯಕ್ತಿಯ ಪುಷ್ಠದಿಂದ ಬ್ಲೂ ಟಿಲಾಪಿಯಾ ಎಂಬ ಮೀನನ್ನು ಮೃತ ಸ್ಥಿತಿಯಲ್ಲಿ ಆಚೆ ತೆಗೆಯಲಾಗಿದೆ.
ತನ್ನ ಹಿಂಭಾಗದಲ್ಲಿ ವಿಪರೀತ ನೋವು ಕಾಣಿಸಿಕೊಂಡಿರುವುದಾಗಿ ವೈದ್ಯರ ಬಳಿ ಬಂದ ಆತನಿಗೆ ಎಕ್ಸ್ರೇ ಮಾಡಿದಾಗ ಹೀಗಾಗಿರುವುದು ತಿಳಿದುಬಂದಿದೆ. ಸಾಮಾನ್ಯವಾಗಿ ಈ ಬ್ಲೂ ಟಿಲಾಪಿಯಾ ಮೀನುಗಳು 30-40 ಸೆಂ.ಮೀ. ಉದ್ದ ಇರುತ್ತವೆ.