alex Certify ಕರೋನಾ ಸಂಕಷ್ಟದ ನಡುವೆಯೂ ನಡೆದಿದೆ ಮುತ್ತಿಕ್ಕುವ ಸ್ಪರ್ಧೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕರೋನಾ ಸಂಕಷ್ಟದ ನಡುವೆಯೂ ನಡೆದಿದೆ ಮುತ್ತಿಕ್ಕುವ ಸ್ಪರ್ಧೆ…!

ಚೀನಾ: ಕರೋನಾ ವೈರಸ್ ನಿಂದ ಶಟ್ ಡೌನ್ ಆಗಿದ್ದ ಚೀನಾ ಈಗ ಮತ್ತೆ ನಿಧಾನವಾಗಿ ಮೊದಲಿನ ಸ್ಥಿತಿಗೆ ಮರಳುತ್ತಿದೆ. ಪೂರ್ವ ಚೀನಾದ ಶೂಜೋವ್ ನಗರದ ಪೀಠೋಪಕರಣ ತಯಾರಿಸುವ ಫ್ಯಾಕ್ಟರಿಯನ್ನು ವಿಭಿನ್ನ ಮತ್ತು ವಿಚಿತ್ರವಾಗಿ ಮರು ಆರಂಭಿಸಲಾಯಿತು. ಹೇಗೆ ಎಂದರೆ ಒಬ್ಬರಿಗೊಬ್ಬರು ಮುತ್ತು ಕೊಡುವ ಮೂಲಕ.!! ಕರೋನಾ ಸಮಯದಲ್ಲಿ ಮುತ್ತೇ…ಆಶ್ಚರ್ಯವಾದರೂ ಇದು ಸತ್ಯ.

ಸಮಾಧಾನದ ಸಂಗತಿ ಎಂದರೆ ಈ ಮುತ್ತಿನ ಮಧುರ ಕ್ಷಣಕ್ಕೆ ಇಬ್ಬರ ನಡುವೆ ಗಾಜಿನ ಗೋಡೆಗಳಿದ್ದವು. “ಕಾರ್ಖಾನೆಯ ಕೆಲಸಗಾರರು ತುಂಬಾ ಚಿಂತಾಕ್ರಾಂತರಾಗಿ, ಗಂಭೀರ ಚಿತ್ತದಲ್ಲಿದ್ದರು. ಅವರನ್ನು ಸಮಾಧಾನಗೊಳಿಸಿ, ಹುರಿದುಂಬಿಸಲು ಈ ಮುತ್ತಿನ ಸ್ಪರ್ಧೆಯನ್ನು ಏರ್ಪಡಿಸಲಾಯಿತು” ಎಂದು ಫ್ಯಾಕ್ಟರಿ ಮಾಲೀಕ ತಿಳಿಸಿದ್ದಾರೆ.

ಅವರಲ್ಲಿ ಕೆಲವರು ನಿಜವಾದ ದಂಪತಿಯೂ ಇದ್ದರು. ಸ್ವಲ್ಪ ಜೋಡಿಗಳನ್ನು ಸ್ಪರ್ಧೆಗಾಗಿ ಹೊರಗಿನಿಂದ ಕರೆಸಲಾಗಿತ್ತು. ಮಧ್ಯದಲ್ಲಿ ನಿಲ್ಲಿಸಲಾಗಿದ್ದ ಗಾಜಿನ ಗೋಡೆಯನ್ನು ಸಹ ಹಲವಾರು ಬಾರಿ ಸ್ವಚ್ಚಗೊಳಿಸಲಾಗಿತ್ತು, ಎಂದು ಅವರು ತಿಳಿಸಿದ್ದಾರೆ.

ಮೊದಲು ಈ ವಿಡಿಯೋ ಚೀನಾದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.ಸುಮಾರು 140 ಮಿಲಿಯನ್ ವೀಕ್ಷಣೆಯನ್ನು ಪಡೆದಿತ್ತು. ನೋಡುಗರು ಇಂಥ ಸಮಯದಲ್ಲಿ ಈ ರೀತಿಯ ಸ್ಪರ್ಧೆಯ ಅವಶ್ಯಕತೆ ಇತ್ತೆ ಎಂದು ಪ್ರಶ್ನಿಸಿದ್ದಾರೆ.

— Global Times (@globaltimesnews) April 19, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...