alex Certify ಬಾಲಕನ ಕಾಲ್ಚೆಳಕ ನೋಡಿ ನಿಬ್ಬೆರಗಾದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಕನ ಕಾಲ್ಚೆಳಕ ನೋಡಿ ನಿಬ್ಬೆರಗಾದ ನೆಟ್ಟಿಗರು

ಬೀಚಿಂಗ್: ಫುಟ್ಬಾಲ್ ಎಂಬುದು ಜನರನ್ನು ಒಟ್ಟುಗೂಡಿಸುವ ವಿಶ್ವದ ಒಂದು ವಿಶಿಷ್ಟ ಆಟ. ಇದಕ್ಕೆ ಬಾಲ್ ಬಿಟ್ಟು ಬೇರೆ ಸಾಧನ ಬೇಕಾಗಿಲ್ಲ. ಸಣ್ಣ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಬಾಲ್ ಸಿಕ್ಕರೆ ಕಾಲಿನಿಂದ ಒದ್ದು, ಫುಟ್ಬಾಲ್ ಆಡುತ್ತಾರೆ. ಇಂಥ ಫುಟ್ಬಾಲ್ನಲ್ಲೇ ಕಸರತ್ತು ಮಾಡುವ ಚೀನಿ ಬಾಲಕ ಈಗ ಪ್ರಸಿದ್ಧನಾಗಿದ್ದಾನೆ.

ಯಿ ಬಿಂಗ್ ಚಾಂಗ್ ಎಂಬ ಬಾಲಕ ಹಗ್ಗದೊಂದಿಗೆ ಸ್ಕೀಪಿಂಗ್ ಮಾಡುತ್ತಲೇ 40 ಕ್ಕೂ ಅಧಿಕ ಬಾರಿ ಫುಟ್ಬಾಲನ್ನು ನೆಲಕ್ಕೆ ಬೀಳದಂತೆ ಒಂದೇ ಕಾಲಿನಲ್ಲಿ ಒದೆಯುವ ವಿಡಿಯೋ ಯೂ ಟ್ಯೂಬ್ನಲ್ಲಿ ಅಪ್ಲೋಡ್ ಆಗಿದೆ.

ಅಷ್ಟೆ ಅಲ್ಲ, ಆತ ಕಣ್ಣಿಗೆ ಬಟ್ಟೆ ಕಟ್ಟಿಕೊಂಡೂ ಈ ರೀತಿ ಫುಟ್ಬಾಲ್ ಕಸರತ್ತು ಮಾಡುವ ಚಿತ್ರಣ ವಿಡಿಯೋದಲ್ಲಿದೆ. ಆತನ ಶಾಲೆಯ ಫುಟ್ಬಾಲ್ ಟೀಮ್ ನ ಭಾಗವಾಗಿರುವ ಬಾಲಕ ನಾಲ್ಕು ತಿಂಗಳಿಂದ ಈ ಕಸರತ್ತನ್ನು ರೂಢಿ ಮಾಡುತ್ತಿದ್ದಾನೆ ಎನ್ನಲಾಗಿದೆ. ಬಾಲಕನ ವಿಡಿಯೋ ನೋಡಿ ನೆಟ್ಟಿಗರು ನಿಬ್ಬೆರಗಾಗಿದ್ದಾರೆ. ಶಹಭಾಸ್ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...