alex Certify ಚೀನಾದ ವುಹಾನ್ ನಲ್ಲಿ ಮತ್ತೆ ವಕ್ಕರಿಸಿದ ಕೊರೊನಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚೀನಾದ ವುಹಾನ್ ನಲ್ಲಿ ಮತ್ತೆ ವಕ್ಕರಿಸಿದ ಕೊರೊನಾ

Cluster infection breaks out in China's Wuhan, raises fears of ...

ಚೀನಾದ ವುಹಾನ್ ನಲ್ಲಿ ಮತ್ತೆ ಕೊರೊನಾ ವಕ್ಕರಿಸಿದೆ. ಕಳೆದ 30 ದಿನಗಳಿಂದ ಯಾವುದೇ ಹೊಸ ಪ್ರಕರಣ ಬೆಳಕಿಗೆ ಬಂದಿರಲಿಲ್ಲ. ಇದ್ರಿಂದ ಚೀನಾ ಜನರು ಖುಷಿಗೊಂಡಿದ್ದರು. ಆದ್ರೆ ಈಗ ಮತ್ತೆ 5 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ.

ಚೀನಾ ಸರ್ಕಾರದಲ್ಲಿ ಪ್ರಕ್ಷುಬ್ಧತೆಯ ವಾತಾವರಣವಿದೆ. ವುಹಾನ್‌ನಲ್ಲಿ ಹೊಸ ಪ್ರಕರಣಗಳು ಬೆಳಕಿಗೆ ಬಂದ ನಂತರ ಕಳಪೆ ಕೆಲಸ ಮಾಡಿದ ಅಧಿಕಾರಿಗಳನ್ನು ವಜಾ ಮಾಡಲಾಗಿದೆ. ವುಹಾನ್ ಬಿಟ್ಟು ಚೀನಾದ ಬೇರೆ ಪ್ರದೇಶಗಳಿಗೂ ಕೊರೊನಾ ಹರಡಿದೆ. ಮಾರ್ಚ್ 24ರಂದು ವುಹಾನ್ ನಲ್ಲಿ ಲಾಕ್ ಡೌನ್ ತೆಗೆಯಲಾಗಿದೆ.

ಚೀನಾ ಸಹಜ ಸ್ಥಿತಿಗೆ ಮರಳುತ್ತಿದೆ. ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗದ ಪ್ರಕಾರ, ದೇಶದಲ್ಲಿ ಭಾನುವಾರ 17 ಹೊಸ ಸೋಂಕು ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ 82,918 ಕ್ಕೆ ಏರಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...