ಭಾರತದಲ್ಲಿ ವಾಸ್ತವ್ಯ ಹೂಡಿರುವ ವಿದೇಶಿ ಪ್ರಜೆಗಳಿಗೆ ಚೀನಾ ಪ್ರವೇಶವನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಚೀನಾ ನಿರ್ಧರಿಸಿದೆ. ಚೀನಿ ವೀಸಾ ಅಥವಾ ನಿವಾಸ ಪರವಾನಿಗಿ ಹೊಂದಿರುವ ಭಾರತದಲ್ಲಿರುವ ವಿದೇಶಿ ಪ್ರಜೆಗಳಿಗೆ ಈ ಆದೇಶ ಅನ್ವಯಿಸಲಿದೆ.
ಇದು ಮಾತ್ರವಲ್ಲದೇ ಚೀನಾ – ಭಾರತದ ಎಲ್ಲಾ ವಿಮಾನಗಳ ಹಾರಾಟಕ್ಕೆ ತಾತ್ಕಾಲಿಕ ಬ್ರೇಕ್ ಹಾಕಿದೆ. ಚೀನಾದ ರಾಜತಾಂತ್ರಿಕ ಹಾಗೂ ಸಿ ವೀಸಾಗಳನ್ನ ಹೊಂದಿರುವ ವಿದೇಶಿಗರ ಮೇಲೆ ಈ ನಿರ್ಬಂಧ ಪರಿಣಾಮ ಬೀರುವುದಿಲ್ಲ. ತುರ್ತು ಪರಿಸ್ಥಿತಿಯಲ್ಲಿ ಚೀನಾಗೆ ಭೇಟಿ ನೀಡುವ ವಿದೇಶಿಗರು ವೀಸಾ ಅರ್ಜಿಯನ್ನ ಭಾರತ – ಚೀನಿ ರಾಯಭಾರಿ ಕಚೇರಿಗೆ ಸಲ್ಲಿಸಬೇಕು ಎಂದು ಹೇಳಿದೆ.
ಹರಡುತ್ತಿರುವ ಕೊರೊನಾ ವೈರಸ್ನ್ನ ನಿಯಂತ್ರಿಸಲು ಕೈಗೊಂಡಿರುವ ತಾತ್ಕಾಲಿಕ ಕ್ರಮ ಇದಾಗಿದೆ ಅಂತಾ ಚೀನಾ ವಿದೇಶಾಂಗ ಸಚಿವಾಲಯ ಹೇಳಿದೆ. ಚೀನಾದ ರಾಯಭಾರ ಕಚೇರಿಯಿಂದ ನೀಡಲಾದ ಈ ಪ್ರಕಟಣೆ ತಾತ್ಕಾಲಿಕ ಕ್ರಮವಾಗಿದ್ದು ಸೂಕ್ತ ಸಮಯದಲ್ಲಿ ಬದಲಾವಣೆ ನಿರೀಕ್ಷಿಸಬಹುದು ಎಂದು ಹೇಳಿದೆ.