alex Certify ಗಂಟಲು ದ್ರವ ಮಾದರಿ ಸಂಗ್ರಹಣೆಗೆ ಬಂತು ರೊಬೋಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಂಟಲು ದ್ರವ ಮಾದರಿ ಸಂಗ್ರಹಣೆಗೆ ಬಂತು ರೊಬೋಟ್

ಕೊರೊನಾ ವೈರಸ್​ ಹರಡುವಿಕೆಯನ್ನ ನಿಯಂತ್ರಿಸಲು ವಿವಿಧ ದೇಶಗಳು ಹಲವು ತರನಾದ ಕ್ರಮಗಳನ್ನ ಕೈಗೊಳ್ಳುತ್ತಿರುವ ಬೆನ್ನಲ್ಲೇ ಚೀನಾ ಶಂಕಿತರಿಂದ ಸ್ವ್ಯಾಬ್​ ಸಂಗ್ರಹ ಮಾಡಲು ರೊಬೋಟ್​ಗಳನ್ನ ನಿಯೋಜಿಸಿದೆ.

ಉತ್ತರ ಚೀನಾದ ಶೆನ್ಯಾಂಗ್​ನಲ್ಲಿ ಸ್ವ್ಯಾಬ್​ ಕೇಂದ್ರಗಳಲ್ಲಿ ರೊಬೋಟಿಕ್​ ಕೈಗಳನ್ನ ಅಳವಡಿಸಲಾಗಿದೆ. ಇದರಿಂದಾಗಿ ಕೊರೊನಾ ವೈರಸ್​ ಹರಡುವ ಅಪಾಯ ಕಡಿಮೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸ್ಕ್ಯಾನರ್​​ನಲ್ಲಿ ಐಡಿ ಕಾರ್ಡ್​ಗಳನ್ನ ತೋರಿಸಿದ ಬಳಿಕ ಮಹಿಳಾ ಧ್ವನಿಯನ್ನ ಹೊಂದಿರುವ ಆಡಿಯೋದಲ್ಲಿ ಬಾಯಿಯನ್ನ ತೆರೆಯುವಂತೆ ಕೇಳಲಾಗುತ್ತದೆ.

ಇದಾದ ಬಳಿಕ ಪ್ಲಾಸ್ಟಿಕ್​​ ಗ್ಲೌಸ್​​ ಧರಿಸಿದ ರೊಬೊಟಿಕ್​ ಕೈಗಳು ಸ್ವ್ಯಾಬ್​ ಸ್ಟಿಕ್​ಗಳ ಮುಖಾಂತರ ಗಂಟಲು ಹಾಗೂ ಮೂಗಿನಿಂದ ದ್ರವವನ್ನ ಸಂಗ್ರಹಿಸುತ್ತವೆ. ರೊಬೋಟ್​ನಿಂದ ಸ್ವಲ್ಪ ದೂರದಲ್ಲಿ ಕುಳಿದ ಆರೋಗ್ಯ ಸಿಬ್ಬಂದಿ ರೊಬೋಟ್​ ಚಲನೆಗೆ ಮಾರ್ಗದರ್ಶನ ನೀಡುತ್ತಿರುತ್ತಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...