ಕೊರೊನಾ ವೈರಸ್ ಹರಡುವಿಕೆಯನ್ನ ನಿಯಂತ್ರಿಸಲು ವಿವಿಧ ದೇಶಗಳು ಹಲವು ತರನಾದ ಕ್ರಮಗಳನ್ನ ಕೈಗೊಳ್ಳುತ್ತಿರುವ ಬೆನ್ನಲ್ಲೇ ಚೀನಾ ಶಂಕಿತರಿಂದ ಸ್ವ್ಯಾಬ್ ಸಂಗ್ರಹ ಮಾಡಲು ರೊಬೋಟ್ಗಳನ್ನ ನಿಯೋಜಿಸಿದೆ.
ಉತ್ತರ ಚೀನಾದ ಶೆನ್ಯಾಂಗ್ನಲ್ಲಿ ಸ್ವ್ಯಾಬ್ ಕೇಂದ್ರಗಳಲ್ಲಿ ರೊಬೋಟಿಕ್ ಕೈಗಳನ್ನ ಅಳವಡಿಸಲಾಗಿದೆ. ಇದರಿಂದಾಗಿ ಕೊರೊನಾ ವೈರಸ್ ಹರಡುವ ಅಪಾಯ ಕಡಿಮೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸ್ಕ್ಯಾನರ್ನಲ್ಲಿ ಐಡಿ ಕಾರ್ಡ್ಗಳನ್ನ ತೋರಿಸಿದ ಬಳಿಕ ಮಹಿಳಾ ಧ್ವನಿಯನ್ನ ಹೊಂದಿರುವ ಆಡಿಯೋದಲ್ಲಿ ಬಾಯಿಯನ್ನ ತೆರೆಯುವಂತೆ ಕೇಳಲಾಗುತ್ತದೆ.
ಇದಾದ ಬಳಿಕ ಪ್ಲಾಸ್ಟಿಕ್ ಗ್ಲೌಸ್ ಧರಿಸಿದ ರೊಬೊಟಿಕ್ ಕೈಗಳು ಸ್ವ್ಯಾಬ್ ಸ್ಟಿಕ್ಗಳ ಮುಖಾಂತರ ಗಂಟಲು ಹಾಗೂ ಮೂಗಿನಿಂದ ದ್ರವವನ್ನ ಸಂಗ್ರಹಿಸುತ್ತವೆ. ರೊಬೋಟ್ನಿಂದ ಸ್ವಲ್ಪ ದೂರದಲ್ಲಿ ಕುಳಿದ ಆರೋಗ್ಯ ಸಿಬ್ಬಂದಿ ರೊಬೋಟ್ ಚಲನೆಗೆ ಮಾರ್ಗದರ್ಶನ ನೀಡುತ್ತಿರುತ್ತಾರೆ.