alex Certify ಚೀನಾದಲ್ಲಿ ವಧುವಿನ ನಿರೀಕ್ಷೆಯಲ್ಲಿದ್ದಾರೆ 3 ಕೋಟಿ ಪುರುಷರು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚೀನಾದಲ್ಲಿ ವಧುವಿನ ನಿರೀಕ್ಷೆಯಲ್ಲಿದ್ದಾರೆ 3 ಕೋಟಿ ಪುರುಷರು….!

ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾದಲ್ಲಿ ಸುಮಾರು 3 ಕೋಟಿಗೂ ಹೆಚ್ಚು ಪುರುಷರಿಗೆ ಮದುವೆಯಾಗಲು ವಧು ಸಿಗ್ತಿಲ್ಲ. 10 ವರ್ಷಗಳಿಗೊಮ್ಮೆ ನಡೆಯಲಿರುವ ಜನಗಣತಿಯಲ್ಲಿ ಇದು ಬಹಿರಂಗವಾಗಿದೆ. ಚೀನಾದಲ್ಲಿ ಅವಿವಾಹಿತ ಪುರುಷರ ಸಂಖ್ಯೆ ಅನೇಕ ದೇಶಗಳ ಒಟ್ಟು ಜನಸಂಖ್ಯೆಗಿಂತ ಹೆಚ್ಚಾಗಿದೆ. ಚೀನಾದಲ್ಲಿಯೂ ಗಂಡುಮಕ್ಕಳಿಗೆ ಹೆಚ್ಚಿನ ಆಧ್ಯತೆ ನೀಡಲಾಗ್ತಿದೆ. ಇದೇ ಕಾರಣಕ್ಕೆ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಿದ್ದು, ಮದುವೆಗೆ ವಧು ಸಿಗ್ತಿಲ್ಲ.

ಇತ್ತೀಚಿನ ಜನಗಣತಿಯಲ್ಲಿ ಬಾಲಕಿಯರ ಒಟ್ಟು ಜನಸಂಖ್ಯೆಯಲ್ಲಿ ಸ್ವಲ್ಪ ಹೆಚ್ಚಳ ಕಂಡುಬಂದಿದೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್‌  ವರದಿ ಮಾಡಿದೆ. ಆದರೆ ಲಿಂಗ ಅಸಮಾನತೆಯ ವಿಷಯವು ಶೀಘ್ರದಲ್ಲೇ ಕೊನೆಗೊಳ್ಳುವ ಸಾಧ್ಯತೆಯಿಲ್ಲ. ಚೀನಾದ ಏಳನೇ ರಾಷ್ಟ್ರೀಯ ಜನಸಂಖ್ಯೆಯ ಅಂಕಿ ಅಂಶದ ಪ್ರಕಾರ, ಕಳೆದ ವರ್ಷ ಜನಿಸಿದ ಒಂದು ಕೋಟಿ 20 ಲಕ್ಷ ಮಕ್ಕಳಲ್ಲಿ, ಪ್ರತಿ 113.3 ಹುಡುಗರಿಗೆ 100 ಹುಡುಗಿಯರು ಇದ್ದರು. ಆದರೆ 2010 ರಲ್ಲಿ ಈ ಸಂಖ್ಯೆ 118.1 ರ ಅನುಪಾತದಲ್ಲಿ 100 ಆಗಿತ್ತು.

ಚೀನಾದ ಅನೇಕ ಕುಟುಂಬಗಳಲ್ಲಿ ಹೆಣ್ಣು ಮಕ್ಕಳಿಲ್ಲ. ಗಂಡು ಮಕ್ಕಳ ಸಂಖ್ಯೆ ಇದೇ ಕಾರಣಕ್ಕೆ ಹೆಚ್ಚಿದೆ. ಸಾಮಾನ್ಯವಾಗಿ ಚೀನಾದಲ್ಲಿ ತಮಗಿಂತ ತುಂಬ ಕಡಿಮೆ ವಯಸ್ಸಿನ ಹುಡುಗಿಯರನ್ನು ಹುಡುಗರು ಮದುವೆಯಾಗ್ತಾರೆ. ಆದ್ರೆ ಇನ್ಮುಂದೆ ಅದು ಸಾಧ್ಯವಿಲ್ಲ. ವಿವಾಹವಿಲ್ಲದ ಪುರುಷರು ಮಾನಸಿಕ ಹಾಗೂ ದೈಹಿಕ ಸಮಸ್ಯೆಯನ್ನು ಎದುರಿಸುತ್ತಾರೆಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...