alex Certify ಯುದ್ಧ ಭೀತಿ: ಕೊರೋನಾ ಬಿಕ್ಕಟ್ಟಿನ ನಡುವೆ ಶುರುವಾಗಲಿದೆ ಅಮೆರಿಕಾ – ಚೀನಾ ವಾರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯುದ್ಧ ಭೀತಿ: ಕೊರೋನಾ ಬಿಕ್ಕಟ್ಟಿನ ನಡುವೆ ಶುರುವಾಗಲಿದೆ ಅಮೆರಿಕಾ – ಚೀನಾ ವಾರ್

ನ್ಯೂಯಾರ್ಕ್: ಕೊರೋನಾ ಸಂಕಷ್ಟ ಬಗೆಹರಿದ ಬೆನ್ನಲ್ಲೇ ಅಮೆರಿಕ ಮತ್ತು ಚೀನಾ ನಡುವೆ ಸಮುದ್ರ ವಾರ್ ಶುರುವಾಗಲಿದೆ.

ದಕ್ಷಿಣ ಚೀನಾ ಸಮುದ್ರದ ಮೇಲೆ ಹಕ್ಕು ಸಾಧಿಸಲು ಚೀನಾ ಪ್ರಯತ್ನ ನಡೆಸಿದ್ದು ವಿವಾದಿತ ಪ್ರದೇಶಕ್ಕೆ ಮೂರು ಯುದ್ಧ ವಿಮಾನಗಳನ್ನು ಅಮೆರಿಕ ರವಾನಿಸಿದೆ. ಇದರಿಂದಾಗಿ ಯುದ್ಧದ ಭೀತಿ ಆವರಿಸಿದೆ.

ಈಗಾಗಲೇ ಕೊರೋನಾ ಸೋಂಕಿನಿಂದ ಚೇತರಿಸಿಕೊಂಡಿರುವ ಚೀನಾ ಚಟುವಟಿಕೆಗಳನ್ನು ವಿಸ್ತರಿಸಿದ್ದು, ಚೀನಾ ಸಮುದ್ರದ ಮೇಲಿನ ತನ್ನ ಹಕ್ಕು ಸ್ಥಾಪಿಸುವ ಯತ್ನವನ್ನು ಪ್ರಬಲಗೊಳಿಸತೊಡಗಿದೆ. ಇದಕ್ಕೆ ತಕ್ಷಣದ ಪ್ರತಿಕ್ರಿಯೆ ನೀಡಿರುವ ಅಮೆರಿಕ ವಿವಾದಿತ ಪ್ರದೇಶಕ್ಕೆ ಮೂರು ಯುದ್ಧ ವಿಮಾನಗಳನ್ನು ಕಳುಹಿಸುವ ಮೂಲಕ ಚೀನಾ ದೇಶಕ್ಕೆ ಎಚ್ಚರಿಕೆ ಸಂದೇಶವನ್ನು ರವಾನೆ ಮಾಡಿದೆ.

ಕೊರೋನಾ ಸೋಂಕಿನ ವಿಚಾರಕ್ಕೆ ಸಂಬಂಧಿಸಿದಂತೆ ಅಮೆರಿಕ ಮತ್ತು ಚೀನಾ ನಡುವೆ ತೆರಿಗೆ ಸಮರ, ವಾಕ್ಸಮರ, ಆರೋಪ, ಪ್ರತ್ಯಾರೋಪ ನಡೆದಿದೆ. ಇದೇ ವೇಳೆ ಹೊಸ ಜಟಾಪಟಿ ಶುರುವಾಗಿರುವುದು ಆತಂಕ ಉಂಟುಮಾಡಿದೆ.

ದಕ್ಷಿಣ ಚೀನಾ ಸಮುದ್ರ ಪ್ರದೇಶ ತನಗೇ ಸೇರಿದ್ದು ಎಂದು ಚೀನಾ ವಾದ ಮಂಡಿಸುತ್ತಲೇ ಬಂದಿದೆ. ಆದರೆ ಸರಕು ಸಂಚಾರಕ್ಕೆ ಇದನ್ನೇ ನಂಬಿಕೊಂಡಿರುವ ಅನೇಕ ದೇಶಗಳು ಚೀನಾ ನಿರ್ಧಾರವನ್ನು ವಿರೋಧ ವ್ಯಕ್ತಪಡಿಸುತ್ತಲೇ ಬಂದಿವೆ. ತೈಲ ಸಂಪದ್ಭರಿತ, ಖನಿಜ ಸಂಪತ್ತು ಹೊಂದಿರುವ ಪ್ರದೇಶಗಳ ಮೇಲೆ ಹಕ್ಕು ಸಾಧಿಸುವ ಪ್ರಯತ್ನವನ್ನು ಚೀನಾ ಮುಂದುವರಿಸಿದ್ದು ಇದಕ್ಕೆ ವಿಯಟ್ನಾಮ್, ತೈವಾನ್, ಫಿಲಿಪೈನ್ಸ್ ಸೇರಿದಂತೆ ಅನೇಕ ದೇಶಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಅಮೆರಿಕ ಮೂರು ಯುದ್ಧ ವಿಮಾನಗಳನ್ನು ರವಾನೆ ಮಾಡಿದ್ದು ಕೊರೋನಾ ಸಂಕಷ್ಟದ ವೇಳೆಯಲ್ಲೇ ಯುದ್ಧದ ಭೀತಿ ಆವರಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...