alex Certify ಐದೇ ದಿನಗಳಲ್ಲಿ ನಿರ್ಮಾಣವಾಯ್ತು 1,500 ಕೊಠಡಿಗಳ ಆಸ್ಪತ್ರೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐದೇ ದಿನಗಳಲ್ಲಿ ನಿರ್ಮಾಣವಾಯ್ತು 1,500 ಕೊಠಡಿಗಳ ಆಸ್ಪತ್ರೆ…!

ದೇಶದಲ್ಲಿ ಕೊರೊನಾ ವೈರಸ್​ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆ ಚೀನಾ ಬೀಜಿಂಗ್​ ನಗರದ ದಕ್ಷಿಣ ಭಾಗದಲ್ಲಿ 1500 ಕೊಠಡಿಗಳುಳ್ಳ ಆಸ್ಪತ್ರೆಯನ್ನ ಕೇವಲ ಐದು ದಿನಗಳಲ್ಲಿ ನಿರ್ಮಿಸಿದೆ.

ಕೊರೊನಾ ಸೋಂಕನ್ನ ಹತೋಟಿಗೆ ತರುವ ಸಲುವಾಗಿ ಚೀನಾ ಸರ್ಕಾರ ಈ ಬೃಹತ್​ ಆಸ್ಪತ್ರೆಯನ್ನ ನಿರ್ಮಾಣ ಮಾಡಿದೆ.

ಹ್ಯೂಬೆಯಲ್ಲಿ ಒಟ್ಟು 6500 ಕೊಠಡಿಗಳನ್ನ ಹೊಂದಿರುವ ಆರು ಆಸ್ಪತ್ರೆಗಳನ್ನ ನಿರ್ಮಿಸಲು ಚೀನಾ ಸರ್ಕಾರ ಯೋಜನೆ ಹಾಕಿದೆ. ಇದೇ ಯೋಜನೆಯ ಮೊದಲ ಹಂತದಲ್ಲಿ ಬೀಜಿಂಗ್​ನಲ್ಲಿ ಈ ಬೃಹತ್​ ಸರ್ಕಾರಿ ಆಸ್ಪತ್ರೆ ನಿರ್ಮಾಣವಾಗಿದೆ.

ಶಿಜುಹ್ವಾಂಗ್​​ನಲ್ಲಿ ಈಗಾಗಲೇ 1 ಸಾವಿರ ಕೊಠಡಿಗಳುಳ್ಳ ಆಸ್ಪತ್ರೆಯನ್ನ ನಿರ್ಮಾಣ ಮಾಡಲಾಗಿದೆ. ವಾರದೊಳಗಾಗಿ ಆಸ್ಪತ್ರೆಯಲ್ಲಿ ಎಲ್ಲಾ ವೈದ್ಯಕೀಯ ಸೌಕರ್ಯ ಒದಗಿಸಲಾಗಿದೆ.

ಕಳೆದ ವರ್ಷ ವುಹಾನ್​​ನಲ್ಲಿ ಕೊರೊನಾ ಸ್ಪೋಟಗೊಂಡ ಸಂದರ್ಭದಲ್ಲೂ ಚೀನಾ ಸರ್ಕಾರ ಇದೇ ರೀತಿ ತ್ವರಿತವಾಗಿ ಆಸ್ಪತ್ರೆಗಳನ್ನ ನಿರ್ಮಾಣ ಮಾಡಿತ್ತು.

ಶುಕ್ರವಾರ ಶಿಜುಹ್ವಾಂಗ್​​ನಲ್ಲಿ 10 ಮಿಲಿಯನ್​ಗೂ ಹೆಚ್ಚು ಜನರಿಗೆ ಕೊರೊನಾ ಪರೀಕ್ಷೆ ಕೈಗೊಳ್ಳಲಾಗಿದೆ. ಇದರಲ್ಲಿ ಸ್ಥಳೀಯವಾಗಿ 247 ಕೊರೊನಾ ಪ್ರಕರಣಗಳು ಪತ್ತೆಯಾಗಿದೆ ಎಂದು ಮೇಯರ್​ ಮೆಂಗ್​ ಕ್ಸಿಯಾಘೋಂಗ್​ ಮಾಹಿತಿ ನೀಡಿದ್ದಾರೆ.

— The Associated Press (@AP) January 16, 2021

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...