
ಕೊರೊನಾ ಸೋಂಕನ್ನ ಹತೋಟಿಗೆ ತರುವ ಸಲುವಾಗಿ ಚೀನಾ ಸರ್ಕಾರ ಈ ಬೃಹತ್ ಆಸ್ಪತ್ರೆಯನ್ನ ನಿರ್ಮಾಣ ಮಾಡಿದೆ.
ಹ್ಯೂಬೆಯಲ್ಲಿ ಒಟ್ಟು 6500 ಕೊಠಡಿಗಳನ್ನ ಹೊಂದಿರುವ ಆರು ಆಸ್ಪತ್ರೆಗಳನ್ನ ನಿರ್ಮಿಸಲು ಚೀನಾ ಸರ್ಕಾರ ಯೋಜನೆ ಹಾಕಿದೆ. ಇದೇ ಯೋಜನೆಯ ಮೊದಲ ಹಂತದಲ್ಲಿ ಬೀಜಿಂಗ್ನಲ್ಲಿ ಈ ಬೃಹತ್ ಸರ್ಕಾರಿ ಆಸ್ಪತ್ರೆ ನಿರ್ಮಾಣವಾಗಿದೆ.
ಶಿಜುಹ್ವಾಂಗ್ನಲ್ಲಿ ಈಗಾಗಲೇ 1 ಸಾವಿರ ಕೊಠಡಿಗಳುಳ್ಳ ಆಸ್ಪತ್ರೆಯನ್ನ ನಿರ್ಮಾಣ ಮಾಡಲಾಗಿದೆ. ವಾರದೊಳಗಾಗಿ ಆಸ್ಪತ್ರೆಯಲ್ಲಿ ಎಲ್ಲಾ ವೈದ್ಯಕೀಯ ಸೌಕರ್ಯ ಒದಗಿಸಲಾಗಿದೆ.
ಕಳೆದ ವರ್ಷ ವುಹಾನ್ನಲ್ಲಿ ಕೊರೊನಾ ಸ್ಪೋಟಗೊಂಡ ಸಂದರ್ಭದಲ್ಲೂ ಚೀನಾ ಸರ್ಕಾರ ಇದೇ ರೀತಿ ತ್ವರಿತವಾಗಿ ಆಸ್ಪತ್ರೆಗಳನ್ನ ನಿರ್ಮಾಣ ಮಾಡಿತ್ತು.
ಶುಕ್ರವಾರ ಶಿಜುಹ್ವಾಂಗ್ನಲ್ಲಿ 10 ಮಿಲಿಯನ್ಗೂ ಹೆಚ್ಚು ಜನರಿಗೆ ಕೊರೊನಾ ಪರೀಕ್ಷೆ ಕೈಗೊಳ್ಳಲಾಗಿದೆ. ಇದರಲ್ಲಿ ಸ್ಥಳೀಯವಾಗಿ 247 ಕೊರೊನಾ ಪ್ರಕರಣಗಳು ಪತ್ತೆಯಾಗಿದೆ ಎಂದು ಮೇಯರ್ ಮೆಂಗ್ ಕ್ಸಿಯಾಘೋಂಗ್ ಮಾಹಿತಿ ನೀಡಿದ್ದಾರೆ.